Gokak

ದೂಪದಾಳ ಗ್ರಾಮದಲ್ಲಿ ಮೊದಲ ಬಾರಿಗೆ ಭೀಮಾ ಕೋರೆಗಾಂವ ವಿಜಯೋತ್ಸವ

Share

ಗೋಕಾಕ ತಾಲೂಕಿನ ದೂಪದಾಳ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಭೀಮಾ ಕೋರೆಗಾಂವ ವಿಜಯೋತ್ಸವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
: ಕಾರ್ಯಕ್ರಮದ ಆರಂಭದಲ್ಲಿ ಸಂವಿಧಾನಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ ಹಾಗೂ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಭಾವ ಚಿತ್ರಕ್ಕೆ ಗಣ್ಯರು ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.

ಬಳಿಕ ಸ್ಥಳಿಯ ಭೀಮ ಆರ್ಮಿಯ ಮುಖಂಡ ಸಂತೋಷ ದೊಡಮನಿ ಮಾತನಾಡಿ ಆಧುನಿಕ ಯುಗದಲ್ಲಿ ಮೊಬೈಲ್ ಜೊತೆ ಹೊಸ ವ್ಯವಸ್ಥೆಗಳು ಬಂದರು ಸಹ ನಮ್ಮ ಜನ ಇತಿಹಾಸ ಗೊತ್ತಿಲ್ಲದೆ ಆಧುನಿಕ ಯುಗದಲ್ಲಿ ಅನಾಚಾರದಲ್ಲಿ ಬದುಕುತಿದ್ದಾರೆ. ನಮ್ಮ ಅಸ್ಮಿಯತೆಯ, ಪರಾಕ್ರಮದ ಮೇಲೆ ನಾವು ಗೆದ್ದಿರುವಂತಹ ಯುದ್ದವನ್ನು ಆಚರಿಸಲು ಪ್ರತಿ ವರ್ಷ ಬಾಬಾ ಸಾಹೇಬರು ಪುಣೆಯಿಂದ ಬಂದು ಕೋರೆಗಾಂವದಲ್ಲಿ ಭೀಮಾ ಕೋರೆಗಾಂವ ವಿಜಯೋತ್ಸವ ಆಚರಿಸುತಿದ್ದರು ಅದರೆ ಅವರು ಈಗ ಇಲ್ಲದಿದ್ದರೆ ಎನಾಯಿತು ಅವರ ವಂಶಸ್ಥರಾದ ನಾವುಗಳು ಕೇವಲ ಕೋರೆಗಾಂವದಲ್ಲಿ ಮಾತ್ರವಲ್ಲದೆ ಪ್ರತಿ ಹಳ್ಳಿ ಹಳ್ಳಿಯಲ್ಲೂ ಕೋರೆಗಾಂವ ವಿಜಯೋತ್ಸವ ಅಚರಿಸುತ್ತೇವೆ. ಕೇವಲ 500 ಜನ ಸೇರಿ 28 ಸಾವಿರ ವಿರೋಧಿಗಳ ಹುಟ್ಟಡಗಿಸಿದ ನಾವುಗಳು ನಾಳೆ ನಾವೆಲ್ಲರೂ ಒಂದಾದರೆ ದೇಶ ಆಳುವವರು ನಾವು ಎಂದು ನುಡಿದರು.

ಈ ಸಂದರ್ಭದಲ್ಲಿ ಮಾನವ ಬಂದುತ್ವ ವೇದಿಕೆಯ ಮುಖಂಡ ರಾಮಕೃಷ್ಣ ಮಾತನಾಡಿ ನಮ್ಮ ದೇಶ ಜಾತ್ಯಾತೀತ ರಾಷ್ಟ್ರ ನಾವೆಲ್ಲಾ ಭಾರತೀಯರೆಂದು ಬಾಬಾಸಾಹೇಬರ ಸಂವಿಧಾನ ಪೀಠಿಕೆಯಲ್ಲಿ ಅಂಬೇಡ್ಕರ್ ಅವರು ಬರೆದಿದ್ದಾರೆ. ಅವರ ಮಾರ್ಗದರ್ಶನದಂತೆ ನಡೆದು ಅವರ ವಿಚಾರಗಳನ್ನು ನಮ್ಮ ಸಮುದಾಯವμÉ್ಟ ಅಲ್ಲದೆ ಬೇರೆ ಸಮುದಾಯದವರಿಗೂ ತಿಳಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಸ್ಥಳಿಯ ಮುಖಂಡರಾದ ರಮೇಶ ಕೋಲಕಾರ, ಹನಮಂತ ಗಾಡಿವಡ್ಡರ ಹಾಗೂ ಇನ್ನುಳಿದ ಮುಖಂಡರು ಉಪಸ್ಥಿರಿದ್ದು ಗಣ್ಯನರಿಗೆ ಭೀಮ ಆರ್ಮಿಯ ಸದಸ್ಯರಿಂದ ಸತ್ಕರಿಸಿ ಸನ್ಮಾನಿಸಲಾಯಿತು.

Tags:

error: Content is protected !!