Belagavi

ಜ.17ರಂದು ಕೆಎಲ್‍ಇ ಕ್ಲಿನಿಕಲ್ ಸ್ಕಿಲ್ಸ ಲ್ಯಾಬ್ ಉದ್ಘಾಟನೆಗೆ ಕೇಂದ್ರ ಸಚಿವ ಅಮಿತ್ ಶಾ: ಡಾ.ಪ್ರಭಾಕರ ಕೋರೆ

Share

ಕೇಂದ್ರ ಗೃಹ ಸಚಿವ ಅಮಿತ್ ಶಾ ಜನವರಿ 17ರಂದು ಬೆಳಗಾವಿಗೆ ಭೇಟಿ ನೀಡಲಿದ್ದು, ಬೆಳಗಾವಿ ಕೆಎಲ್‍ಇ ಆಸ್ಪತ್ರೆಯ ಅಡ್ವಾನ್ಸ್ ಸಿಮ್ಯೂಲೇಶನ್ ಸೆಂಟರ್ ಮತ್ತು ಕ್ಲಿನಿಕಲ್ ಸ್ಕಿಲ್ಸ್ ಲ್ಯಾಬ್ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಾರ್ಪಣೆಗೊಳಿಸಲಿದ್ದಾರೆ.

ಬೆಳಗಾವಿಯ ಪ್ರತಿಷ್ಠಿತ ಜವಾಹರ್‍ಲಾಲ್ ನೆಹರೂ ವೈದ್ಯಕೀಯ ಕಾಲೇಜಿನ ಕ್ಯಾಂಪನ್‍ನಲ್ಲಿರುವ ಅತ್ಯಾಧುನಿಕ ಅಡ್ವಾನ್ಸ್ ಸಿಮ್ಯೂಲೇಶನ್ ಸೆಂಟರ್ ಮತ್ತು ಕ್ಲಿನಿಕಲ್ ಸ್ಕಿಲ್ಸ್ ಲ್ಯಾಬ್ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಮಧ್ಯಾಹ್ನ 3 ಗಂಟೆಗೆ ಲೋಕಾರ್ಪಣೆಗೊಳಿಸಲಿದ್ದಾರೆ. ತಾಯಿಯ ಭ್ರೂಣದ ಆರೈಕೆ, ನವಜಾತ ಶಿಶು ಆರೈಕೆ ಮತ್ತು ವಯಸ್ಕ ರೋಗಿಗಳ ಆರೈಕೆಗಾಗಿ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ, ಇಂಟರ್ ವೆನಶನಲ್ ಅಲ್ಟ್ರಾಸೌಂಡ್ ತರಬೇತಿಗಾಗಿ ಸಿಮ್ಯೂಲೇಟರ್‍ಗಳನ್ನು ಹೊಂದಿದ ಲ್ಯಾಬ್ ಆಗಿದೆ ಎಂದು ಕೆಎಲ್‍ಇ ವೈದ್ಯರು ಮಾಹಿತಿ ನೀಡಿದರು.

ಈ ವೇಳೆ ಕೆಎಲ್‍ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಕೆಎಲ್‍ಇ ಆಸ್ಪತ್ರೆಯ ಅಡ್ವಾನ್ಸ್ ಸಿಮ್ಯೂಲೇಶನ್ ಸೆಂಟರ್ ಮತ್ತು ಕ್ಲಿನಿಕಲ್ ಸ್ಕಿಲ್ಸ್ ಲ್ಯಾಬ್ ಅತ್ಯಾಧುನಿಕ ಬಹುವೃತ್ತಿಪರ ತರಬೇತಿ ಸೌಲಭ್ಯವಾಗಿದೆ. ಅತ್ಯಾಧುನಿಕ ವೈದ್ಯಕೀಯ ಸಿಮ್ಯೂಲೇಟರ್‍ಗಳು ಮತ್ತು ಕೌಶಲ್ಯ ತರಬೇತಿ ನೀಡುವ ಕೇಂದ್ರವಾಗಿದೆ. ಗೃಹ ಸಚಿವ ಅಮೀತ್ ಶಾ ಜನವರಿ 17ರಂದು ಮಧ್ಯಾಹ್ನ 3 ಗಂಟೆಗೆ ಬೆಳಗಾವಿಗೆ ಆಗಮಿಸಲಿದ್ದು, ತರಬೇತಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. 45 ನಿಮಿಷಗಳ ಅವಧಿಯಲ್ಲಿ ಸರಳ, ಸಂಕ್ಷಿಪ್ತ ಕಾರ್ಯಕ್ರಮ ಇದಾಗಿರಲಿದೆ ಎಂದು ತಿಳಿಸಿದರು.

ಒಟ್ಟಿನಲ್ಲಿ ಬೆಳಗಾವಿಗೆ ಭೇಟಿ ನೀಡಲಿರುವ ಗೃಹ ಸಚಿವ ಅಮೀತ್ ಶಾ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಕೆಎಲ್‍ಇ ಆಸ್ಪತ್ರೆಗೆ ಭೇಟಿ ನೀಡಿ ಪ್ರಯೋಗಾಲಯ, ತರಬೇತಿ ಕೇಂದ್ರ ಉದ್ಘಾಟಿಸುತ್ತಿರುವುದು ವಿಶೇಷವಾಗಿದೆ ಎಂದು ಕೆಎಲ್‍ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾಹಿತಿ ನೀಡಿದರು.

Tags:

error: Content is protected !!