COVID-19

ಜ.16ರಂದು ರಾಜ್ಯಾಧ್ಯಂತ ಕೊರೊನಾ ಲಸಿಕೆ ವಿತರಣೆ..ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Share

ಜನವರಿ 16ರಿಂದ ರಾಜ್ಯಾದ್ಯಂತ ಕೊರೊನಾ ಲಸಿಕೆ ವಿತರಣೆಯಾಗಲಿದ್ದು ಇದಕ್ಕಾಗಿ ಎಲ್ಲ ರೀತಿಯ ಸಿದ್ದತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಆನಂದ್ ರಾವ್ ಸರ್ಕಲ್ ನಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಟ್ಟಡದಲ್ಲಿ ಲಸಿಕೆ ದಾಸ್ತಾನಿಗೆ ಕೈಗೊಂಡಿರುವ ಸಿದ್ದತೆಗಳ ಬಗ್ಗೆ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್ ಜನವರಿ 16ರಿಂದ ದೇಶದ ಜನರಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ. ಕೊರೊನಾ ಯೋಧರಿಗೆ ಮೊದಲನೆಯದಾಗಿ ವ್ಯಾಕ್ಸಿನ್ ನೀಡಲಾಗುತ್ತದೆ. ಲಸಿಕೆ ದಾಸ್ತಾನು ಸೌಲಭ್ಯವನ್ನು ವೀಕ್ಷಣೆ ಮಾಡಿದ್ದೇನೆ ಎಂದರು. ಮೊದಲ ಹಂತದಲ್ಲಿ ಬೆಂಗಳೂರಿಗೆ 1,13,400 ಮತ್ತು ಬೆಳಗಾವಿಗೆ 25,800 ವಯಲ್ ಬರಲಿದೆ ಎಂದು ತಿಳಿಸಿದರು.

ಬೆಂಗಳೂರಿನ ಉಗ್ರಾಣದಿಂದ ಬೆಂಗಳೂರು, ಚಿತ್ರದುರ್ಗ, ಮೈಸೂರು, ದಕ್ಷಿಣ ಕನ್ನಡ ಮತ್ತು ಕಲ್ಬುರ್ಗಿಗೆ ರವಾನೆ ಮಾಡಲಾಗುತ್ತದೆ. ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ಕೂಡಾ ಇದೇ ಬಗೆಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಬೆಂಗಳೂರು 2, ಮೈಸೂರು 2, ದಕ್ಷಿಣ ಕನ್ನಡ 1, ಚಿತ್ರದುರ್ಗ 1, ಕಲ್ಬುರ್ಗಿ 2, ಬಾಗಲಕೋಟೆ 1, ಬೆಳಗಾವಿ 1 ವಾಕ್ಯೂಮ್ ಕೂಲರ್‍ಗಳು ರಾಜ್ಯದ ಬಳಿ ಇವೆ. ರಾಜ್ಯದಲ್ಲಿ 5 ಪ್ರಾದೇಶಿಕ ದಾಸ್ತಾನು ಕೇಂದ್ರಗಳಿವೆ. ಪ್ರತಿ ಜಿಲ್ಲೆಯಲ್ಲಿ ಒಂದು ಲಸಿಕಾ ದಾಸ್ತಾನು ಸೌಲಭ್ಯವಿದೆ. ಬಿಬಿಎಂಪಿಯಲ್ಲಿ ಒಂದು ಲಸಿಕೆ ದಾಸ್ತಾನು ಕೇಂದ್ರವಿದೆ. ಇಲ್ಲಿಂದ ಐದು ರೀಜನಲ್ ಸ್ಟೋರೇಜ್‍ಗಳಿಗೆ ಲಸಿಕೆ ಸರಬರಾಜು ಮಾಡಲಾಗುತ್ತದೆ ಎಂದು ಹೇಳಿದರು. ವ್ಯಾಕ್ಸಿನ್ ವಿತರಣೆಗೆ ರಾಜ್ಯದಾದ್ಯಂತ ಕೋಲ್ಡ್ ಚೈನ್ ರೆಡಿಯಾಗಿದೆ. ವ್ಯಾಕ್ಸಿನ್ ಸಂರಕ್ಷಣೆ, ವಿತರಣೆಗೆ 6 ಹಂತಗಳಲ್ಲಿ ಕೋಲ್ಡ್ ಚೈನ್ ರೂಪಿಸಲಾಗಿದೆ. ಬೆಂಗಳೂರು ವಿಭಾಗದಲ್ಲಿ ನಾಲ್ಕು, ಬೆಳಗಾವಿ ವಿಭಾಗದಲ್ಲಿ ಒಂದು ಪ್ರಾದೇಶಿಕ ಕೋಲ್ಡ್ ಸ್ಟೋರೇಜ್‍ಗಳಿಗೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

 

Tags:

error: Content is protected !!