ಹೌದು ತಾಲೂಕಾ ಆಸ್ಪತ್ರೆ ಖಾನಾಪೂರದಲ್ಲಿ ಕೊವೀಡ್-19 ಲಸಿಕೆಗೆ ಖಾನಾಪೂರ ಪಿಎಸ್ಐ ಬಸನಗೌಡ ಪಾಟೀಲ್ ಅವರು ಲಸಿಕಾ ಕೊಠಡಿಗೆ ರಿಬೀನ್ ಕಟ್ ಮಾಡಿ ಉದ್ಘಾಟಿಸಿದರು. ತದನಂತರ ದ್ವೀಪ ಬೆಳಗಿಸುವ ಮೂಲಕ ಲಸಿಕಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಾ ಆಸ್ಪತ್ರೆಯ ನೊಂದಾಯಿತ ಸಿಬ್ಬಂದಿಗಳು ಈ ಲಸಿಕೆಯನ್ನು ಹಾಕಿಸಿಕೊಂಡರು.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾಕ್ಟರ್ ಸಂಜಯ್ ನಾಂದ್ರೇ ಅವರು ಮಾತನಾಡಿ ಖಾನಾಪೂರ ತಾಲೂಕಿಗೆ 167 ಲಸಿಕೆಗಳ ಗುರಿ ನೀಡಲಾಗಿತ್ತು, ಇದರಲ್ಲಿ 60 ಜನರು ನಮ್ಮ ಇಲಾಖೆಯ ಸಿಬ್ಬಂದಿ ಹಾಗೂ ವೈದ್ಯರು ಈ ಲಸಿಕೆಯನ್ನು ಹಾಕಿಸಿಕೊಂಡರು.ಇದರಿಂದ ಹಾಕಿಸಿಕೊಂಡ ಎಲ್ಲರೂ ಆರೋಗ್ಯವಂತರಾಗಿದ್ದಾರೆ ಎಂದು ಹೇಳಿದರು.
ತದನಂತರದ ಲಸಿಕೆ ಹಾಕಿಸಿ ಕೊಂಡ ಇನ್ನೊರ್ವ ಸ್ಟಾಪ್ ನರ್ಸ ಸುಜಾತಾ ಮಹಾಲಯ್ ಮಾತನಾಡಿ ಲಸಿಕೆ ಹಾಕಿಸಿ ಕೊಂಡ ತಮ್ಮ ಅನುಭವಗಳನ್ನು ಹಂಚಿಕೊಂಡು ನಾವು ನಮ್ಮ ನೊಂದಾಯಿತ ಲಸಿಕೆಯನ್ನು ಹಾಸಿಕೊಂಡೆವೂ ಯಾವುದೇ ರೀತಿಯ ತೊಂದರೆಯಾಗಿಲ್ಲ ಸಾರ್ವಜನಿಕರು ಹೆದರುವ ಅಗತ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾಕ್ಟರ್ ನಾರಾಯಣ ವಡ್ಡಿನ್, ಡಾಕ್ಟರ್ ರಾಜಶ್ರೀ ಪಾಟೀಲ್, ಡಾಕ್ಟರ್ ಇಮಾದ್ , ಡಾಕ್ಟರ್ ಪ್ರಗತಿ ವಿನಾಯಕ, ಡಾಕ್ಟರ್ ಶಿವಾನಂದ ಕಿನಾಗಿ ,ಪ್ರಭು ರಾಜ್, ಸುರೇಶ್ ರಾವ್ ಸೇರಿದಂತೆ ಶಿವಾನಂದ ಬುಡರಕಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಕೊನೆಗೆ ತಾಲೂಕಾ ಆರೋಗ್ಯ ಇಲಾಖೆಯ ಸರ್ವ ಸಿಬ್ಬಂದಿಗಳು ಲಸಿಕೆ ಹಾಕಿಸಿ ಕೊಂಡು ಕೊರೋನಾ ವಿಜಯದ ನಗೆ ಬಿರಿದರು.