Belagavi

ಕಾಂಗ್ರೆಸ್ “ರಾಜಭವನ ಚಲೋ” ಬಸ್‍ಗೆ ಪ್ರಿಯಾಂಕಾ ಜಾರಕಿಹೊಳಿ ಚಾಲನೆ

Share

ಬೆಂಗಳೂರಿನಲ್ಲಿ ಜ.20ರಂದು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ “ರಾಜಭವನ ಚಲೋ” ಬೃಹತ್ ಪ್ರತಿಭಟನೆಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ತೆರಳುತ್ತಿದ್ದು, ಅವರು ತೆರಳುವ ವಾಹನಕ್ಕೆ ಸತೀಶ್ ಶುಗರ್ಸ್ ಲಿಮಿಟೆಡ್‍ನ ನಿರ್ದೇಶಕಿ ಪ್ರಿಯಾಂಕಾ ಜಾರಕಿಹೊಳಿ ಗೋಕಾಕ್‍ನ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಂಗಳವಾರ ಚಾಲನೆ ನೀಡಿದರು.

ಹೌದು ಕೇಂದ್ರ ಸರ್ಕಾರವು ಸರ್ವಾಧಿಕಾರಿ ಧೋರಣೆಯಿಂದ ದೇಶದ ಅನ್ನದಾತರ ಮೇಲೆ ಹೇರಿದ ಕೃಷಿ ವಿರೋಧಿ ಮಸೂದೆಗಳನ್ನು ಹಿಂಪಡೆಯುವಂತೆ ರೈತರು ದನಿವರಿಯದ ನಿರಂತರ ಹೋರಾಟ ನಡೆಸಿದ್ದಾರೆ. ರೈತರಿಗೆ ಬೆಂಬಲ ಸೂಚಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸುತ್ತಿದ್ದಾರೆ.ಬೆಳಗಾವಿಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಮಂಗಳವಾರ ಗೋಕಾಕ್‍ನ ಹಿಲ್ ಗಾರ್ಡನ್‍ನಲ್ಲಿ ಬಸ್‍ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸುಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಚಾಲನೆ ನೀಡಿದರು.

ಈ ವೇಳೆ  ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಮ್ರಾನ್ ತಫಕಿರ, ವಿವೇಕ ಜತ್ತಿ, ಮಾರುತಿ ಗುಟಗುದ್ದಿ, ಕಲ್ಪನಾ ಜೋಶಿ, ಪಾಂಡುರಂಗ ಸೂಬೆ, ವಿಠ್ಠಲ ಪರಸಣ್ಣವರ, ರೆಹಮಾನ್ ಮುಕಾಸಿ, ಇಲಿಯಾಸ್ ಇನಾಮದಾರ್, ಮಂಜುಳಾ ರಾಮಗಾನಟ್ಟಿ ಸೇರಿದಂತೆ ಇತರರು ಇದ್ದರು.

ಅದೇ ರೀತಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ತೆರಳುವ ವಾಹನಕ್ಕೆ ಶಾಸಕರ ಆಪ್ತ ಸಹಾಯಕ ಮಲ್ಲಗೌಡ ಪಾಟೀಲ ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಸದಸ್ಯ ಸಿದ್ದು ಸುಣಗಾರ, ರಾಜು ಮಾಯಣ್ಣಾ ಸೇರಿದಂತೆ ಗ್ರಾಪಂ. ತಾಪಂ ಸದಸ್ಯರು ಇದ್ದರು.

Tags:

error: Content is protected !!