Belagavi

ಈತ ಅಂತಿಂತ ಭೂಪನಲ್ಲ..ಬರೊಬ್ಬರಿ 72 ಬಾರಿ ಟ್ರಾಫಿಕ್ ರೂಲ್ಸ ಬ್ರೇಕ್ ಮಾಡಿದವ..!

Share

ಈ ಆಸಾಮಿ ಒಂದಲ್ಲ ಎರಡಲ್ಲ ಬರೊಬ್ಬರಿ 72 ಬಾರಿ ಟ್ರಾಫಿಕ್ ರೂಲ್ಸಗಳನ್ನು ಉಲ್ಲಂಘನೆ ಮಾಡಿದ್ದಾನೆ. ಈ ಭೂಪನನನ್ನು ಇಂದು ಬೆಳಗಾವಿ ಪೊಲೀಸರು ವಶಕ್ಕೆ ಪಡೆದುಕೊಂಡು ದಂಡ ವಿಧಿಸಿ, ಇನ್ಮುಂದೆ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ತಿಳುವಳಿಕೆ ನೀಡಿ ಕಳಿಸಿ ಕೊಡಲಾಗಿದೆ.

ಹೌದು 72 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ ವ್ಯಕ್ತಿ ಬೆಳಗಾವಿಯ ಆರಿಫ್ ಜಮಾದಾರ್ ಎಂದು ಗುರುತಿಸಲಾಗಿದೆ. ಈ ಕುರಿತು ಡಿಸಿಪಿ ಡಾ,ವಿಕ್ರಂ ಅಮಟೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು. ಆರೀಫ್ ಜಮಾದಾರ್ (28) ಎನ್ನುವ ವ್ಯಕ್ತಿ ಒಟ್ಟೂ 72 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿರುವುದು ಪೆÇಲೀಸರ ಗಮನಕ್ಕೆ ಬಂದಿದೆ. 72 ಬಾರಿ ಸೇರಿ ಒಟ್ಟೂ 18,800 ರೂಪಾಯಿ ದಂಡ ಕಟ್ಟಿದ್ದಾನೆ. ಪ್ರತಿ ಬಾರಿ ಹಿಡಿದಾಗಲೂ ದಂಡ ಕಟ್ಟಿ ಹೋಗುತ್ತಾನೆ. ಮತ್ತೆ ಅದೇ ಅಥವಾ ಬೇರೆ ಮಾದರಿಯ ನಿಯಮ ಉಲ್ಲಂಘನೆ ಮಾಡುತ್ತಾನೆ. ಹೆಲ್ಮೆಟ್ ಧರಿಸದಿರುವುದು ಹೆಚ್ಚಿನ ಸಂದರ್ಭದಲ್ಲಿ ಕಂಡುಬಂದಿದೆ. ಜೊತೆಗೆ ನೋ ಪಾಕಿರ್ಂಗ್ ಸ್ಥಳದಲ್ಲಿ ಬೈಕ್ ಪಾರ್ಕ್ ಮಾಡಿರುವುದು, ಒನ್ ವೇ ಸಂಚಾರ ನಿಯಮ ಉಲ್ಲಂಘನೆ ಸೇರಿ ಇನ್ನು ಮುಂತಾದ ಕೇಸ್‍ಗಳು ಈತನ ಮೇಲಿದ್ದವು ಎಂಬ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆ ಬರೊಬ್ಬರಿ 72 ಬಾರಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿರುವ ಆರಿಫ್ ಜಮಾದಾರ್‍ಗೆ ತಿಳುವಳಿಕೆ ನೀಡಿ, ಸಂಚಾರಿ ನಿಯಮಗಳ ಬಗ್ಗೆ ಅಗತ್ಯ ತರಬೇತಿ ನೀಡಿ ಪೊಲೀಸರು ಕಳಿಸಿಕೊಟ್ಟಿದ್ದಾರೆ. ಇನ್ಮುಂದಾದ್ರೂ ಸಂಚಾರಿ ನಿಯಮ ಪಾಲಿಸಿ ದಂಡ ಕಟ್ಟುವುದರಿಂದ ಬಚಾವ್ ಆಗುತ್ತಾನಾ ಎಂದು ಕಾಯ್ದು ನೋಡಬೇಕಿದೆ.

Tags:

error: Content is protected !!