Belagavi

ಇಂದು ಬೆಳಗಾವಿ ಸಿಟಿ ರೌಂಡ್ ಹಾಕಲಿದ್ದಾರೆ ಅರ್ಬನ್ ಡೆವಲಪ್ಮೆಂಟ್ ಮಿನಿಸ್ಟರ್..

Share

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಇಂದು ಬೆಳಗಾವಿಗೆ ಆಗಮಿಸಲಿದ್ದು. ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಲಿರುವ ಭೈರತಿ ಬಸವರಾಜ್, ನಾಳೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಿದ್ದಾರೆ.

ಇಂದು ಗುರುವಾರ ಮದ್ಯಾಹ್ನ 3-00 ಗಂಟೆಯಿಂದ ಬೆಳಗಾವಿ ನಗರದಲ್ಲಿ ನಗರಾಭಿವೃದ್ಧಿ ಸಚಿವರು ಸ್ಮಾರ್ಟ್‍ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಇಂದು ಭೈರತಿ ಬಸವರಾಜ್ ಎಲ್ಲೆಲ್ಲಿ ಹೋಗುತ್ತಾರೆ ಎಂದು ನೋಡೋದಾದ್ರೆ
ವಾಣಿಜ್ಯ ಕಟ್ಟಡ (ಎ.ಪಿ.ಎಂ.ಸಿ ರಸ್ತೆ)
(ಮಹಾನಗರ ಪಾಲಿಕೆ ಕಾಮಗಾರಿ)
ಪೌರಕಾರ್ಮಿಕ ಗೃಹಭಾಗ್ಯ ವಸತಿ ಸಂಕೀರ್ಣ(ಎ.ಪಿ.ಎಂ.ಸಿರಸ್ತೆ)
(ಮಹಾನಗರ ಪಾಲಿಕೆ ಕಾಮಗಾರಿ)
ನಗರ ಕೇಂದ್ರ ಬಸ್ ನಿಲ್ದಾಣ (ಸ್ಮಾರ್ಟ್ ಸಿಟಿ ಕಾಮಗಾರಿ)
ತ್ಯಾಜ್ಯ ನೀರು ಸಂಸ್ಕರಣ ಘಟಕ ( STP Halaga )
(KUWS & DB ಕಾಮಗಾರಿ)
ಬಹು ಉಪಯೋಗಿ ಕಟ್ಟಡ (ಕಲಾಮಂದಿರ)
(ಸ್ಮಾರ್ಟ ಸಿಟಿ ಕಾಮಗಾರಿ)
ಸರಾಫ ಕಾಲೋನಿ ಉದ್ಯಾನವನ (ಸ್ಮಾರ್ಟ ಸಿಟಿ ಕಾಮಗಾರಿ)
ಪಟವರ್ಧನ ಲೇಔಟ್ ಉದ್ಯಾನವನ (ಸ್ಮಾರ್ಟ ಸಿಟಿ ಕಾಮಗಾರಿ)
ಅನೆಕ್ಸ್ ಕಟ್ಟಡ (ಮಹಾನಗರ ಪಾಲಿಕೆ ಕಾಮಗಾರಿ)

ಈ ಎಲ್ಲಾ ಕಾಮಗಾರಿ ಸ್ಥಳಗಳಿಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಇನ್ನು ಸಚಿವರು ಬರುತ್ತಿರುವ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳಲ್ಲಿ ಪೌರಕಾರ್ಮಿಕರು ಹೆಚ್ಚಿನ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದ್ದು ಕಂಡು ಬಂದಿದೆ.

Tags:

error: Content is protected !!