ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡಾ ಪಾಟೀಲ ಯತ್ನಾಳರ ವ್ಯಯಕ್ತಿಕ ಭದ್ರತೆ ವಾಪಸ್ ಹಿನ್ನಲೆಯಲ್ಲಿ ವಿಜಯಪುರ ನಗರದ ಬಿಜೆಪಿ ಮುಖಂಡರೊರ್ವರು ಪ್ರಧಾನಿ ಕಚೇರಿಗೆ ದೂರು ನೀಡಿದ್ದಾರೆ. ವಿಜಯಪುರ ನಗರ ಬಿಜೆಪಿ ಯುವ ಮುಖಂಡ ಹಾಗೂ ಓಬಿಸಿ ಮೊರ್ಚಾದ ಉಪಾಧ್ಯಕ್ಷ ಭೀಮು ಮಾಶ್ಯಾಳ ಆನಲೈನ್ ಮೂಲಕ ದೂರು ನೀಡಿ ಶಾಸಕ ಯತ್ನಾಳ ಅವರಿಗೆ ಜೀವ ಭಯವಿದೆ ಎಂದು ಗೊತ್ತಿದ್ದರೂ ಕೂಡಾ ಸಿಎಂ ಯಡಿಯೂರಪ್ಪ ತಮ್ಮ ರಾಜಕೀಯ ಜಿದ್ದಾಜಿದ್ದಿ ನಿಂದ ಈ ರೀತಿ ಮಾಡಿದ್ದಾರೆ. ಭದ್ರತೆ ವಾಪಸ್ ಪಡೆದಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿ ಶಾಸಕ ಯತ್ನಾಳ ಅವರಿಗೆ ಭದ್ರತೆ ಒದಗಿಸುವ ಪ್ರಧಾನಿಗೆ ಮನವಿ ಮಾಡಿದ್ದಾರೆ...