ಇಂದು ದೇಶಾಧ್ಯಂತ ಕೊರೊನಾ ಲಸಿಕೆ ವಿತರಣೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಹಿನ್ನೆಲೆ ದೇಶಾಧ್ಯಂತ ಲಸಿಕೆ ನೀಡಲು ಆರಂಭಿಸಲಾಗಿದೆ. ಅದೇ ರೀತಿ ಬೆಳಗಾವಿಯ ಬಿಮ್ಸ ಆಸ್ಪತ್ರೆಯಲ್ಲಿಯೂ ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲಾಗಿದೆ.
ಹೌದು ದೇಶಾಧ್ಯಂತ ೩೦೦೬ ಕೇಂದ್ರಗಳಲ್ಲಿ ಶನಿವಾರ ಕೊರೊನಾ ಲಸಿಕೆ ನೀಡುವ ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ ಪ್ರಧಾನಿ ಮೋದಿ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ಅದೇ ರೀತಿ ಬೆಳಗಾವಿಯ ಬಿಮ್ಸ ಆಸ್ಪತ್ರೆಯಲ್ಲಿಯೂ ಲಸಿಕೆ ನೀಡಲು ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಈ ವೇಳೆ ನಗರ ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ ಅವರು ಲಸಿಕೆ ವಿತರಣೆಗೆ ಚಾಲನೆ ನೀಡಿದರು. ಕೋವಿನ್ ಆಪ್ನಲ್ಲಿ ಹೆಸರು ನೋಂದಾಯಿಸಿದ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ನೀಡಲಾಯಿತು. ಮೊದಲಿಗೆ ಬಿಮ್ಸನ ಡಿ ಗ್ರೂಪ್ ಸಿಬ್ಬಂದಿ ರಮೇಶ ಬಸಪ್ಪ ಕುಂಬಾರಗೆ ಲಸಿಕೆ ನೀಡಲಾಯಿತು.
ಲಸಿಕೆ ತೆಗೆದುಕೊಂಡ ಬಳಿಕ ಮಾತನಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ ರಮೇಶ ಕುಂಬಾರ ನಾನು ಬಿಮ್ಸನಲ್ಲಿ ಸಮುದಾಯ ವೈದ್ಯಶಾಸ್ತç ವಿಭಾಗದಲ್ಲಿ ಗ್ರೂಪ್ ಡಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕೋವಿನ್ ಆಪ್ನಲ್ಲಿ ಹೆಸರು ನೋಂದಾಯಿಸಿದ್ದೇವು. ಈಗ ಮೊದಲಿಗೆ ನಮ್ಮ ಹೆಸರು ಬಂದಿರುವುದರಿAದ ನಮಗೆ ಲಸಿಕೆ ನೀಡಿದ್ದಾರೆ. ಸರ್ಕಾರಕ್ಕೆ ಈ ಸಂದರ್ಭದಲ್ಲಿ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.
ಬಳಿಕ ಇನ್ನೊರ್ವ ಆರೋಗ್ಯ ಸಿಬ್ಬಂದಿ ನಿಂಗಪ್ಪ ಯಲ್ಲಪ್ಪ ಬಾಗೋಜಿ ಮಾತನಾಡಿ ಪ್ರಯೋಗಾಲಯ ಸಹಾಯಕರಾಗಿ ಬಿಮ್ಸ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮೊದಲು ಯಾವಾಗ ಲಸಿಕೆ ಬರುತ್ತದೆ ಎಂದು ಎಲ್ಲಾ ಜನರು ಕೇಳುತ್ತಿದ್ದರು. ಆದರೆ ಈಗ ಲಸಿಕೆ ಬಂದ ನಂತರ ಎಲ್ಲರೂ ಭಯಭೀತರಾಗಿದ್ದಾರೆ. ಹೀಗಾಗಿ ಯಾರೂ ಆತಂಕಕ್ಕೆ ಒಳಗಾಗದೇ ಲಸಿಕೆ ತೆಗೆದುಕೊಳ್ಳಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲಸಿಕೆ ನೀಡಲು ಚಾಲನೆ ನೀಡಿದ ಬಳಿಕ ಶಾಸಕ ಅನಿಲ್ ಬೆನಕೆ ಮಾತನಾಡಿ ದೇಶಾಧ್ಯಂತ ಪ್ರಧಾನಿ ಮೋದಿ ಅವರು ಲಸಿಕೆ ನೀಡಲು ಚಾಲನೆ ನೀಡಿದ್ದಾರೆ. ಹೀಗಾಗಿ ಬೆಳಗಾವಿಯಲ್ಲಿ ದಕ್ಷಿಣ ಶಾಸಕರು ಮತ್ತು ನಾವು ಚಾಲನೆ ನೀಡಿದ್ದೇವೆ. ಕೊರೊನಾ ಲಸಿಕೆ ಕಂಡು ಹಿಡಿದ ನಂತರ ಇಡೀ ಜಗತ್ತಿನ ಕಣ್ಣು ನಮ್ಮ ಭಾರತ ದೇಶದ ಮೇಲೆ ಬಿದ್ದಿದೆ. ಅತ್ಯಂತ ವ್ಯವಸ್ಥಿತವಾಗಿ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ದೇಶದ ಎಲ್ಲಾ ಜನರ ಪರವಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ವೇಳೆ ಡಿಎಚ್ಓ ಡಾ.ಎಸ್.ವ್ಹಿ.ಮುನ್ಯಾಳ, ಬಿಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ, ಜಿಲ್ಲಾ ಸರ್ಜನ್ ಖಾಜಿ, ಜಿಲ್ಲಾ ಆಡಳಿತಾಧಿಕಾರಿ ಅಫ್ರಿನಾ ಭಾನು ಬಳ್ಳಾರಿ ಸೇರಿದಂತೆ ಇನ್ನು ಹಲವರು ಉಪಸ್ಥಿತರಿದ್ದರು. ಒಟ್ಟಾರೆ ಬೆಳಗಾವಿ ಜಿಲ್ಲೆಯ ೧೩ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ನೀಡಲು ಆರಂಭಿಸಲಾಗಿದೆ. ಪ್ರತಿ ಕೇಂದ್ರಗಳಲ್ಲಿ ೧೦೦ ಆರೋಗ್ಯ ಕಾರ್ಯಕರ್ತರಿಗೆ ಇಂದು ಲಸಿಕೆ ನೀಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು ಮೊದಲ ಹಂತದಲ್ಲಿ ಬೆಳಗಾವಿ ಜಿಲ್ಲೆಯ ೩೭ ಸಾವಿರಕ್ಕೂ ಹೆಚ್ಚು ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲು ಗುರಿ ಇಟ್ಟುಕೊಳ್ಳಲಾಗಿದೆ. ಅದೇ ರೀತಿ ಹಂತ ಹಂತವಾಗಿ ಕೋವಿನ್ ಆಪ್ನಲ್ಲಿ ಹೆಸರು ನೋಂದಾಯಿಸಿದ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಂತೂ ಇಂತೂ ಕೊರೊನಾ ಲಸಿಕೆ ಇಂದು ಕೊರೊನಾ ವಾರಿಯರ್ಸ್ ಹಾಕಲಾಗಿದ್ದು ಒಳ್ಳೆಯ ಬೆಳವಣಿಗೆಯೇ ಸರಿ.