Chikkodi

ಮಾಂಜರಿಯಲ್ಲಿ ಅಂಗಡಿ ಬೆಂಕಿಗೆ ಆಹುತಿ ಕೇಸ್..ಏಕತಾ ಫೌಂಡೇಶನ್ ಆರ್ಥಿಕ ನೆರವು

Share

ಇತ್ತಿಚಿಗೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಸುನಿಲ ಮಹಿಂದ ಎಂಬುವರಿಗೆ ಸೇರಿದ ಅಂಗಡಿಗೆ ಬೆಂಕಿ ತಗುಲಿ ಅಂಗಡಿಯು ಸಂಪೂರ್ಣವಾಗಿ ಸುಟ್ಟುಕರಕಲಾಗಿತ್ತು.ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿತ್ತು. ಈ ಹಿನ್ನಲೆಯಲ್ಲಿ ಮಾಂಜರಿಯ ಏಕತಾ ಫೌಂಡೇಶನ್ ಸದಸ್ಯರು ಮಹಿಂದ ಅವರ ಕುಟುಂಬಕ್ಕೆ ಕುಟುಂಬಕ್ಕೆ ಸಾಂತ್ವನ ಹೇಳಿ 10 ಸಾವಿರ ರೂಪಾಯಿ ಆರ್ಥಿಕ ನೆರವನ್ನು ನೀಡಿದ್ದಾರೆ.

ಹೌದು ಇತ್ತೀಚಿಗೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಸುನಿಲ್ ಮಹಿಂದ ಎಂಬುವರಿಗೆ ಸೇರಿದ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಂಗಡಿಯು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿತ್ತು. ಇದರಿಂದ ತೀವ್ರ ಬಡತನದಲ್ಲಿ ಜೀವನವನ್ನು ಸಾಗಿಸುತ್ತಿದ್ದ ಮಹಿಂದ ಅವರ ಕುಟುಂಬ ದುಃಖದ ಮಡುವಿನಲ್ಲಿ ತೇಲಾಡುತ್ತಿತ್ತು. ಇದರಿಂದ ಆ ನೊಂದ ಕುಟುಂಬಕ್ಕೆ ಶಕ್ತಿಯನ್ನು ನೀಡುವ ಉದ್ದೇಶದಿಂದ ಮಾಂಜರಿಯ ಎಕತಾ ಫೌಂಡೇಷನ್ನ ಸದಸ್ಯರು ಇವತ್ತು ಮಹಿಂದ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ 10 ಸಾವಿರ ರೂಪಾಯಿಯ ಆರ್ಥಿಕ ನೆರವನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ದೀಲಿಪ ಪವಾರ, ಸಂಜಯ ನಾಂದ್ರೆ, ಸುರೇಶ ಮಂಗಳಕರ, ರಾಜು ಪಾಟೋಳೆ, ವಿಜಯ ಮಾನವ, ವಿನೋದ ಚವ್ಹಾಣ, ಸಚಿನ ಮಾನೆ ಸೇರಿದಂತೆ ಏಕತಾ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.

Tags:

error: Content is protected !!