Uncategorized

ಸಂಶಯಾಸ್ಪದವಾಗಿ ಮಹಿಳೆ ಸಾವು: ತವರು ಮನೆಯವರಿಂದ ನ್ಯಾಯಕ್ಕೆ ಆಗ್ರಹ

Share


ಬೆಳಗಾವಿ ಶಾಹುನಗರದ ನಿವಾಸದಲ್ಲಿ ಮಹಿಳೆಯೊಬ್ಬರು ಸಂಶಯಾಸ್ಪದವಾಗಿ ಮೃತಪಟ್ಟಿದ್ದು, ಗಂಡನ ಮನೆಯವರು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆಕೆಯ ತವರು ಮನೆಯವರು ಇದು ಕೊಲೆ ಎಂದು ಹೇಳುತ್ತಿದ್ದು, ಗಂಡನ ಮನೆಯವರ ವಿರುದ್ಧ ಪ್ರತಿಭಟನೆ ನಡೆಸಿದರು.

ಬೆಳಗಾವಿ ಶಾಹುನಗರದ ನಿವಾಸದಲ್ಲಿ ಮಹಿಳೆಯೊಬ್ಬರು ಸಂಶಯಾಸ್ಪದವಾಗಿ ಬುಧವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು 30 ವರ್ಷದ ಸುಮಿತ್ರಾ ಸುಭಾಷ್ ಪಮ್ಮಾರ ಎಂದು ಗುರುತಿಸಲಾಗಿದೆ. ಆಕೆಯ ಗಂಡನ ಮನೆಯವರು ಕಲ್ಮಠ ತಾಂಡಾದವರಾಗಿದ್ದು ಕಾಯಿಪಲ್ಲೆ ವ್ಯಾಪಾರ ಮಾಡುತ್ತಾರೆ. ತವರು ಮನೆಯವರು ರಾಮದುರ್ಗ ತಾಲೂಕು ಚೈನಾಪುರ ತಾಂಡಾದವರಾಗಿದ್ದಾರೆ. ಮಹಿಳೆ ಮೃತಪಟ್ಟ ಸುದ್ದಿ ತಿಳಿಯುತ್ತಲೇ ತವರ ಮನೆಯವರು ಶಾಹುನಗರಕ್ಕೆ ಬಂದಿದ್ದು, ತವರು ಮನೆ ಹಾಗೂ ಗಂಡನ ಮನೆಯವರ ನಡುವೆ ಗುರುವಾರ ಬೆಳಗ್ಗೆ ತೀವ್ರ ವಾಗ್ವಾದ ನಡೆದಿದೆ. ಪೊಲೀಸರು ಬರುವವರೆಗೂ ಸ್ಥಳದಿಂದ ಶವವನ್ನು ಒಯ್ಯಲು ಬಿಡುವುದಿಲ್ಲ ಎಂದು ಮೃತ ಮಹಿಳೆಯ ಹತ್ತಿರದ ಸಂಬಂಧಿಗಳು ಪಟ್ಟು ಹಿಡಿದರು.

ಈ ವೇಳೆ ಮೃತ ಮಹಿಳೆಯ ಸಂಬಂಧಿ ಮಾತನಾಡಿ, ಮದುವೆಯಾಗಿ 20 ವರ್ಷವಾಗಿದೆ. ತವರು ಮನೆಗೆ ಕಳುಹಿಸುತಿರಲಿಲ್ಲ. ತೊಂದರೆ ನೀಡುತ್ತಿದ್ದರು. ಅವಳಿಗೆ ಇಬ್ಬರು ಮಕ್ಕಳಿದ್ದಾರೆ. ಬಡಿದು ಕೊಲೆ ಮಾಡಿದ್ದಾರೆ. ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ನಮಗೆ ನ್ಯಾಯ ಬೇಕು ಎಂದು ಒತ್ತಾಯಿಸಿದರು.

ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Tags:

error: Content is protected !!