ಕೊಲೆ ಸುಪಾರಿ ಕೊಟ್ಟು ಪ್ರಿಯತಮನಿಂದ ಗಂಡನನ್ನೆ ಕೊಲ್ಲಿಸಿದ್ದ ಪಾಪಿ ಮಹಿಳೆ ಮತ್ತು ಪ್ರಿಯತಮನಿಗೆ ಹೆಡೆಮುರಿ ಕಟ್ಟುವಲ್ಲಿ ಖಾನಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು ಜಾಂಬೋಟಿ ಗ್ರಾಮದಲ್ಲಿ ನಡೆದ ಫೋಟೋಗ್ರಾಫರ್ ವಿಜಯ್ ಅವಲಕ್ಕಿ ಕೊಲೆ ಕೇಸ್ ತೀವ್ರ ಅನುಮಾನಕ್ಕೆ ಕಾರಣವಾಗಿತ್ತು. ಪ್ರಕರಣದ ಜಾಡು ಹಿಡಿದು ಹೋದಾಗ ಕೊಲೆ ಮಾಡಿದವರು ಬೇರೆ ಯಾರು ಅಲ್ಲ. ಕೊಲೆಯಾದ ವಿಜಯ್ ಅವಲಕ್ಕಿ ಪತ್ನಿ ಸುಭೋದಾಳ ಪ್ರಿಯತಮ ರಾಮಮಂದ್ರ ಕಾಂಬಳೆ ಎಂಬುದು ಗೊತ್ತಾಗಿದೆ. ವಿಜಯ್ ಪತ್ನಿ ಸುಭೋದಾಳಿಗೂ ರಾಮಚಂದ್ರ ಕಾಂಬಳೆಗೂ ಅನೈತಿಕ ಸಂಬಂಧವಿತ್ತು. ಹೀಗಿದ್ದಾಗ ಸುಭೋದಾ ಒಂದು ದಿನ ನನ್ನ ಗಂಡನನ್ನು ಕೊಂದು ನನ್ನ ಹತ್ತಿರ ಬಾ ಎಂದು ಹೇಳಿದ್ದಳಂತೆ. ಇದರಿಂದ ರಾಮಚಂದ್ರ ಕಾಂಬಳೆ ತನ್ನ ಸ್ನೇಹಿತ ನಾರಾಯಣ ಹಾಗೂ ಮೂವರು ಬಾಲ ಅಪರಾಧಿಗಳನ್ನು ಕಟ್ಟಿಕೊಂಡು ವಿಜಯ್ ಅವಲಕ್ಕಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ವಿಚಾರ ಸಧ್ಯ ಬೆಳಕಿಗೆ ಬಂದಿದೆ. ಈ ಎಲ್ಲಾ ಸಂಗತಿಯನ್ನು ಐವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಆಂಟಿ ಕೊಲೆ ಕುರಿತು ಎಲ್ಲಾ ಸಂಗತಿ ಬಾಯಿ ಬಿಟ್ಟಿದ್ದಾಳೆ. ಈ ವೇಳೆ ಸುಭೋದಾಳ ಮೊಬೈಲ್ನ್ನು ಪೊಲೀಸರು ಪರಿಶೀಲನೆ ಮಾಡಿದಾಗ ಸುಭೋದಾ ನನ್ನ ಗಂಡನನ್ನು ಮುಗಿಸಿ ನನ್ನ ಹತ್ತಿರ ಬಾ ಎಂದು ರಾಮಚಂದ್ರನಿಗೆ ಮೆಸೆಜ್ ಮಾಡಿದ್ದು ಕೂಡ ಬಹಿರಂಗವಾಗಿದೆ. ಈಗ ಐವರು ಆರೋಪಿಗಳನ್ನು ಪೊಲೀಸರು ಕೃಷ್ಣನ ಜನ್ಮಸ್ಥಳಕ್ಕೆ ಅಟ್ಟಿದ್ದಾರೆ
ಏನೇ ಆಗಲಿ ಈ ರೀತಿ ಮಾಡಬಾರದು ಮಾಡಿದ್ರೆ ಕಂಬಿ ಎಣಿಸುವುದು ಗ್ಯಾರಂಟಿ ಎಂಬಂತೆ ಆರೋಪಿಗಳು ಅರೆಸ್ಟ ಆಗಿ ಜೈಲಿನಲ್ಲಿ ಕಟಕ ರೊಟ್ಟಿ ಮುರಿಯಲಿದ್ದಾರೆ.