ತೊಗರಿ ರಾಶಿ ಮಾಡುವ ಮಷೀನ್ ನಲ್ಲಿ ಸಿಲುಕಿಕೊಂಡು ಮಹಿಳೆ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಕ್ಕಬೇವನೂರ ಗ್ರಾಮದಲ್ಲಿ ನಡೆದಿದೆ.
ಚಿಕ್ಕಬೇವನೂರ ಗ್ರಾಮದ ನಿವಾಸಿ ಸುಜಾತ ಅಮಸಿದ್ಧ ಬಗಲಿ ಮೃತ ದುರ್ದೈವಿ ಮಹಿಳೆಯಾಗಿದ್ದು ಈಕೆ ತೊಗರಿ ರಾಶಿ ಮಾಡುವ ವೇಳೆ ಆಯತಪ್ಪಿ ತೊಗರಿ ಮಷೀನ್ ನಲ್ಲಿ ಸಿಲುಕಿಕೊಂಡು ಸ್ಥಳದಲ್ಲೇ ಸುಜಾತ ಸಾವನ್ನಪ್ಪಿದ್ದಾಳೆ. ಇನ್ನೂ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮಟ್ಟಿದೆ. ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲಿಸರು ದೂರು ದಾಖಲಿಸಿಕೊಂಡಿದ್ದಾರೆ…