ಜಮೀನಿನಲ್ಲಿ ಕಬ್ಬು ಕಟಾವು ಮಾಡುವ ವೇಳೆಗೆ ಆಕಸ್ಮಿಕವಾಗಿ ಕಬ್ಬು ಕಟಾವು ಮಶಿನ್‍ಗೆ ಬೆಂಕಿ ಹಂತಿದ್ದರಿಂದ ಎರಡ್ಮೂರು ಎಕರೆ ಕಬ್ಬು ಬೆಂಕಿಗಾಹುತಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದಲ್ಲಿ ನಡೆದಿದೆ.
: ಹೌದು ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಸಂದರ್ಭದಲ್ಲಿ ಆಕಸ್ಮಿಕವಾಗಿ ಮಿಷನಗೆ ಬೆಂಕಿ ತಗುಲಿ ಮಶಿನ್ ಧಗಧನೆ ಹೊತ್ತಿ ಉರಿದು ಸುಟ್ಟುಕರಕಲಾಗಿದೆ. ಚಿಕ್ಕೋಡಿ ತಾಲೂಕಿನ ಚಂದೂರ ಗ್ರಾಮದ ಅನಿಲ ಪಾಟೀಲ ಎಂಬ ರೈತರಿಗೆ ಸೇರಿದ ಕಬ್ಬು ಕಟಾವು ಮಶಿನ್ ಇದಾಗಿದೆ. ಬೆಂಕಿ ತಗಲುತ್ತಿದಂತೆ ಚಾಲಕ ಜಾಣ್ಮೆಯಿಂದ ಪಾರಾಗಿದಾನೆ.
ಕಬ್ಬಿನ ಗದ್ದೆಗೂ ಸಹ ಬೆಂಕಿ ತಗುಲಿದೆ. ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರು ಸಾಧ್ಯವಾಗದ ಕಾರಣ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಲು ಮುಂದಾದರೂ ಕೂಡಾ ಮಿಷನ್ ಸುಟ್ಟು ಕರಕಲಾಗಿದೆ.