Gokak

ಪಂಚಾಯ್ತಿ ಎಲೆಕ್ಷನ್ ವೈಷಮ್ಯ..ದೊಣ್ಣೆ ಹಿಡಿದು ಬೀದಿ ಕಾಳಗಕ್ಕೆ ನಿಂತ ನಾರಿಯರು..!

Share

ಗ್ರಾಮ ಪಂಚಾಯ್ತಿ ಚುನಾವಣೆ ಮುಗಿದು ಹೋಗಿ ಫಲಿತಾಂಶವೂ ಬಂದಿದೆ. ಆದ್ರೆ ಇನ್ನು ಕೂಡ ಇದರ ಕಾವು ಆರಿಲ್ಲ. ಇನ್ನು ಚುನಾವಣೆ ವೈಷಮ್ಯದಿಂದ ನಾರಿಯರು ದೊಣ್ಣೆಗಳಿಂದ ಬೀದಿ ಕಾಳಗ ನಡೆಸಿರುವ ಘಟನೆ ಗೋಕಾಕ್ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಹೌದು ಬೀದಿಗಿಳಿದು ದೊಣ್ಣೆ, ಬಡಿಗೆಗಳಿಂದ ಹೊಡೆದಾಡಿಕೊಳ್ಳುತ್ತಿರುವ ನಾರಿಮನಿಯರು..ಸುತ್ತಲೂ ಬಿಗುವಿನ ವಾತಾವರಣ…ಎಲ್ಲೆಲ್ಲಿಯೂ ಗದ್ದಲ್ಲ..ಕೈ ಕೈ ಮಿಲಾಯಿಸಿ ಬಡಿದಾಟ..ಹೌದು ನೀವು ನೋಡುತ್ತಿರುವ ಈ ದೃಶ್ಯ ಗೋಕಾಕ್ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ.

: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಕುಡಿಯುವ ನೀರು ಸ್ಥಗಿತಗೊಳಿಸಿದ್ದರಿಂದ ಈ ರೀತಿ ಗಲಾಟೆ ಆಗಿದೆ. ಅಷ್ಟಕ್ಕೂ ಪಂಚಾಯ್ತಿ ಚುನಾವಣೆ ಮುಗಿದು ಫಲಿತಾಂಶವೂ ಮುಗಿದು ಹೋಗಿದೆ. ಆದ್ರೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಕೈಯಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ. ಸಧ್ಯ ನಾರಿಮನಿಯರ ಈ ಬೀದಿ ಕಾಳಗದ ವಿಡಿಯೋ ಸೊಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಒಟ್ಟಾರೆ ರಾಜಕೀಯ ರಾಜಕೀಯಕ್ಕೆ ಅಷ್ಟೇ ಸಿಮೀತಗೊಳಿಸಬೇಕು. ಆದ್ರೆ ಈ ರೀತಿ ಹೆಣ್ಮಕ್ಕಳು ಕೂಡ ಬೀದಿಗೆ ಬಂದು ರಂಪಾದ ಮಾಡಿ..ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಬಡಿದಾಡುವುದು ಎಷ್ಟು ಸರಿ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

 

Tags:

error: Content is protected !!