State

ಯತ್ನಾಳ್‍ಗೆ ಮೂಗುದಾರ ಹಾಕುವ ಜವಾಬ್ದಾರಿ ಕಟೀಲ್‍ಗೆ ವಹಿಸಿದ ಉಸ್ತುವಾರಿ ಅರುಣ್ ಸಿಂಗ್

Share

ಪದೇ ಪದೇ ಸಿಎಂ ಬಿಎಸ್‍ವೈ ನಾಯಕತ್ವದ ವಿರುದ್ಧ ಯತ್ನಾಳ್ ಹೇಳಿಕೆ ನೀಡುವ ಮೂಲಕ ಬಿಜೆಪಿ ಪಕ್ಷಕ್ಕೆ ಮುಜುಗರ ಮಾಡುತ್ತಿದ್ದಾರೆ. ಹೀಗಾಗಿ ಯತ್ನಾಳ್‍ಗೆ ಮೂಗುದಾರ ಹಾಕುವ ಹೊಣೆಯನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಹೆಗಲಿಗೆ ಹಾಕಿದ್ದಾರೆ.

ಹೌದು ಬಸನಗೌಡ ಪಾಟೀಲ್ ಯತ್ನಾಳ್ ನೇರಾನೇರ ಮಾತಾಡುವ ಉತ್ತರಕರ್ನಾಟಕದ ಪ್ರಭಾವಿ ಬಿಜೆಪಿ ಶಾಸಕ. ಸಂತ್ರಾಂತಿ ಬಳಿಕ ಸಿಎಂ ಬದಲಾವಣೆ ಗ್ಯಾರಂಟಿ, ನಾನು ಬಿಎಸ್‍ವೈ ಕ್ಯಾಬಿನೇಟ್‍ನಲ್ಲಿ ಮಂತ್ರಿ ಆಗೋದಿಲ್ಲ, ಹಣೆಬರಹ ಇದ್ದರೆ ನಾನು ಸಿಎಂ ಆಗುತ್ತೇನೆ ಎಂದು ಹೇಳಿಕೆಗಳನ್ನು ನೀಡಿದ್ದು ಶಿಸ್ತಿನ ಪಕ್ಷ ಬಿಜೆಪಿಗೆ ತೀವ್ರ ಮುಜುಗರವಾಗಿತ್ತು.

ಅಷ್ಟೇ ಅಲ್ಲದೇ ಯತ್ನಾಳ್ ಹೇಳಿಕೆ ಹಿಂದೆ ಕಾಣದ ಕೈಗಳಿವೆ. ಹೀಗಾಗಿ ಯತ್ನಾಳ್ ವಿರುದ್ಧ ಹೈಕಮಾಂಡ್ ಶಿಸ್ತು ಕ್ರಮ ಕೈಗೊಳ್ಳುತ್ತಿಲ್ಲ ಎನ್ನಲಾಗುತ್ತಿತ್ತು. ಆದರೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಕಾರ್ಯಕಾರಿಣಿ ಹಾಗೂ ವಿಶೇಷ ಸಭೆಗೆ ರಾಜ್ಯಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗಳು ಯತ್ನಾಳ್ ಬಗ್ಗೆ ಕೇಳಿದ್ದಕ್ಕೆ ವೂ ಇಸ್ ಯತ್ನಾಳ್ ಎಂದು ಅರುಣ್ ಸಿಂಗ್ ಗರಂ ಆದ್ರು. ಯಾವುದೇ ದೊಡ್ಡ ನಾಯಕ ಇರಲಿ, ಸಣ್ಣ ನಾಯಕ ಇರಲಿ.

ಪಕ್ಷದ ವಿರುದ್ಧ ಯಾರೂ ಸಾರ್ವಜನಿಕವಾಗಿ ಟೀಕೆ ಮಾಡಬಾರದು ಎಂದು ಹೇಳಿದರು.
ಅದೇ ರೀತಿ ಯತ್ನಾಳ್‍ರನ್ನು ಕರೆಸಿ ಮಾತನಾಡುವಂತೆ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್‍ಗೆ ಅರುಣ್‍ಸಿಂಗ್ ಜವಾಬ್ದಾರಿ ವಹಿಸಿದ್ದು. ಯತ್ನಾಳ್ ಅಸಮಾಧಾನವನ್ನು ತಣಿಸಲು ಕಟೀಲ್ ಯಶಸ್ವಿಯಾಗುತ್ತಾರಾ ಅಥವಾ ಮತ್ತೆ ಇನ್ನಷ್ಟು ರೆಬೆಲ್ ಆಗುತ್ತಾರಾ ಎಂದು ಕಾಯ್ದು ನೋಡಬೇಕಿದೆ.

Tags:

error: Content is protected !!