ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಶೋಷಣೆಯನ್ನು ತಡೆಯಲು ಗುಮ್ಮಟನಗರಿ ಪೊಲೀಸರು ಹೊಸ ವರ್ಷಕ್ಕೆ ಹೊಸ ಯೋಜನೆ ಪ್ರಾರಂಭಿಸಿದ್ದಾರೆ.
ಹೊತ್ತಲ್ಲದ ಹೊತ್ತಲ್ಲಿ ಒಂಟಿ ಮಹಿಳೆಯರು, ಯುವತಿಯರ ರಕ್ಷಣೆಗೆ ನಿರ್ಭಯ ಯೋಜನೆ ಶಕ್ತಿ ನೀಡಲಿದೆ. ಕೇಂದ್ರ ಸರ್ಕಾರದ ನಿರ್ಭಯ ಯೋಜನೆಯಡಿ ಗುಮ್ಮಟನಗರಿ ವಿಜಯಪುರ ಜಿಲ್ಲೆಗೆ ಹೊಸ 26 ಮೋಟಾರ್ ಬೈಕ್‌ಗಳನ್ನು ಪೊಲೀಸ್ ಠಾಣೆಗಳಿಗೆ ನೀಡಲಾಗಿದೆ. ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ನಿರ್ಭಯಾ ಯೋಜನೆಗೆ ಎಸ್ಪಿ ಅನುಪಮ ಅಗರವಾಲ್ ಚಾಲನೆ ನೀಡಿದರು.
ಈ ಯೋಜನೆಯ ನಿಧಿಯಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯಗಳನ್ನು ತಡೆಗಟ್ಟುವುದಕ್ಕಾಗಿಯೇ ಭಾರತ ಸರ್ಕಾರದ ನಿರ್ಭಯ ಯೋಜನೆಯಡಿಯಲ್ಲಿ ನಿರ್ಭಯ ದ್ವಿಚಕ್ರ ವಾಹನ ನೀಡಿದೆ. ಇದರಿಂದ ಮಾನವ ಕಳ್ಳ ಸಾಗಣೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯದಂತಹ ಪ್ರಕರಣಗಳು ಕಂಡು ಬಂದರೆ ತಕ್ಷಣ ಹೊಸ ಬೈಕ್ ಗಳ ಮೂಲಕ ಸ್ಥಳಕ್ಕೆ ಧಾವಿಸಿ ಅನಾಹುತಗಳನ್ನು ತಪ್ಪಿಸಲು ಹಗಲೂ ರಾತ್ರಿ ಎಚ್ಚರ ವಹಿಸಲಾಗುತ್ತದೆ ಎಂದು ಎಸ್ಪಿ ಅನುಪಮ ಅಗರವಾಲ್ ಮಾಹಿತಿ ನೀಡಿದರು…