Uncategorized

ಖಾಲಿ ಇಲ್ಲದ ಕುರ್ಚಿಗೆ ಇಷ್ಟೇಕೆ ಗುದ್ದಾಟ- ಸಚಿವ ಜಗದೀಶ್ ಶೆಟ್ಟರ್

Share

ಸಿಎಂ ಹುದ್ದೆ ಬದಲಾವಣೆ ಇಲ್ಲ. ಮುಂದಿನ ಎರಡುವರೆ ವರ್ಷ ಬಿ.ಎಸ್.ಯಡಿಯೂರಪ್ಪ ಅವರೇ ರಾಜ್ಯದ ಮುಖ್ಯಮಂತ್ರಿ ಎಂದು ಸಚಿವ ಜಗದೀಶ್ ಶೆಟ್ಟರ್ ಮತ್ತೊಮ್ಮೆ ತಿಳಿಸಿದ್ದಾರೆ.

ದೇಶಪಾಂಡೆ ನಗರದ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದ ಸಂಘಟನೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಇದಕ್ಕೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಶೇ.60 ರಷ್ಟು ಬಿಜೆಪಿ ಬೆಂಬಲಿಗ ಅಭ್ಯರ್ಥಿಗಳು ಗೆದ್ದಿರುವುದು ಸಾಕ್ಷಿಯಾಗಿದೆ. ಬೆಳಗಾವಿ ಲೋಕಸಭಾ ಉಪಚುನಾವಣೆಯ ದಿನಾಂಕ ನಿಗಧಿಯಾಗಿಲ್ಲ. ಈವರೆಗೆ ಚರ್ಚೆ ನಡೆದಿಲ್ಲ. ಅಭ್ಯರ್ಥಿ ಕೂಡಾ ನಿರ್ಧಾರ ಮಾಡಿಲ್ಲ ಎಂದರು.

ಇನ್ನೂ ಉದ್ಯಮದಾರರ ಕುರಿತು ಮಾತನಾಡಿದ ಅವರು, ಹಲವಾರು ಉದ್ಯಮದಾರರೊಂದಿಗೆ ಮಾತುಕತೆ ನಡೆದಿದೆ. ಅಲ್ಲದೇ ಇನ್ಫೋಸಿಸ್ ಆರಂಭದ ಕುರಿತು ಕಂಪನಿಯ ಮಾಲೀಕರಿಗೆ ತಿಳಿಸಿದೆ ಆದಷ್ಟು ಬೇಗ ಪ್ರಾರಂಭವಾಗಲಿದೆ ಎಂದರು.

Tags:

error: Content is protected !!