Kagawad

ಕಾಗವಾಡ ತಾಲೂಕಾ ಪಂಚಾಯತಿ ಅಧ್ಯಕ್ಷೆ ಕೃಷ್ಣಾಬಾಯಿ ನಂದ್ಯಾಳೆ ಇವರ 8 ಲಕ್ಷ ರೂ. ಅನುದಾನದ ಕಾಮಗಾರಿಗಳಿಗೆ ಪೂಜೆ ಕಾರ್ಯಕ್ರಮ

Share

ಕಾಗವಾಡ ತಾಲೂಕಾ ಪಂಚಾಯತಿಯ 15ನೇ ಹಣಕಾಸಿನ ಯೋಜನೆಯಡಿಯಲ್ಲಿ ಜುಗೂಳ ಗ್ರಾಮದಲ್ಲಿ 8 ಲಕ್ಷ ರೂ. ವೆಚ್ಚದ ಬೇರೆ-ಬೇರೆ ಕಾಮಗಾರಿಗಳಿಗೆ ಪೂಜಾ ಕಾರ್ಯಕ್ರಮ ಮತ್ತು ನೂತನ ಗ್ರಾಪಂ ಸದಸ್ಯರಿಗೆ ಸನ್ಮಾನಿಸುವ ಕಾರ್ಯಕ್ರಮ ಚಿಕ್ಕೋಡಿ ಡಿಕೆಎಸ್‍ಎಸ್ ಸಕ್ಕರೆ ಕಾರ್ಖಾನೆಯ ಸಂಚಾಲಕ ಅಣ್ಣಾಸಾಹೇಬ ಪಾಟೀಲರಿಂದ ನೆರವೇರಿತು.

ಶುಕ್ರವಾರ ರಂದು ಜುಗೂಳ ಗ್ರಾಮದಲ್ಲಿ ತಾಪಂ ಸದಸ್ಯರು ಹಾಗೂ ಅಧ್ಯಕ್ಷರಾದ ಕೃಷ್ಣಾಬಾಯಿ ನಂದ್ಯಾಳೆ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.

ಗ್ರಾಮದ ಮುಖಂಡರಾದ ಅಣ್ಣಾಸಾಹೇಬ ಪಾಟೀಲ ಇವರ ಹಸ್ತೆಯಿಂದ ತಾಲೂಕಾ ಪಂಚಾಯತಿಯ 15ನೇ ಹಣಕಾಸಿನ ಯೋಜನೆಯಡಿಯಲ್ಲಿ ಮಂಜೂರುಗೊಂಡ 8 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ ಭವನದ ಹತ್ತಿರ ಕುಡಿಯುವ ನೀರಿನ ವ್ಯವಸ್ಥೆ, ಲಿಂಗಾಯತ ಸಮಾಜದ ರುದ್ರಭೂಮಿಯಲ್ಲಿ ಶೇಡ್ ನಿರ್ಮಾಣ ಕಾಮಗಾರಿ, ಕನ್ನಡ ಸರಕಾರಿ ಶಾಲೆಯಲ್ಲಿ ಶೌಚಾಲಯ ಕಟ್ಟಡ, ತೋಟದ ರಸ್ತೆ ನಿರ್ಮಾಣ ಕಾಮಗಾರಿಗೆ ಅನುದಾನ ನೀಡಿದ್ದು, ಸರಕಾರಕ್ಕೆ ನಾನು ಅಭಿನಂದಿಸುತ್ತೇನೆ. ಅದೇ ರೀತಿ ನೂತನ ಗ್ರಾಮ ಪಂಚಾಯತಿ ಸದಸ್ಯರನ್ನು ಆಯ್ಕೆಮಾಡಿದ ಎಲ್ಲ ಜನರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.

ಯುವ ಮುಖಂಡ ಬಸವರಾಜ ನಂದ್ಯಾಳೆ ಮಾತನಾಡಿ, ತಾಲೂಕಾ ಪಂಚಾಯತಿಯ ಅನುದಾನದಿಂದ 8 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಂಡಿದ್ದು, ತಾಪಂ ಅಧ್ಯಕ್ಷೆ ಹಾಗೂ ತಾಯಿಯವರಾದ ಕೃಷ್ಣಾಬಾಯಿ ನಂದ್ಯಾಳೆ ಇವರ ನೇತೃತ್ವದಲ್ಲಿ ಗ್ರಾಮದ ಅಭಿವೃದ್ಧಿ ಕೈಗೊಂಡಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಶ್ರೀಮಂತ ಪಾಟೀಲ ಇವರ ಸಹಕಾರದಿಂದ ಗ್ರಾಮಕ್ಕೆ ಇನ್ನಷ್ಟು ಅನುದಾನ ತಂದು ಅಭಿವೃದ್ಧಿ ಕೈಗೊಳ್ಳುತ್ತೇವೆಯೆಂದು ಹೇಳಿದರು.

ಮಂಗಾವತಿ ಗ್ರಾಮದ ನೂತನ ಗ್ರಾಪಂ ಸದಸ್ಯರಾದ ಮೆಹಬುಬ್ ಕಿಲ್ಲೇದಾರ ಮಾತನಾಡುವಾಗ, ಈ ಗ್ರಾಮ ಕೃಷ್ಣಾ ನದಿ ತೀರದಲ್ಲಿ ಮತ್ತು ಮಹಾರಾಷ್ಟ್ರದ ಗಡಿಗ್ರಾಮವಾಗಿದೆ. ಇಲ್ಲಿಯ ಅಭಿವೃದ್ಧಿಗಾಗಿ ಆಯ್ಕೆಮಾಡಿದ ಜನರ ಸಮಸ್ಯೆಗಳು ಈಡೆಯರಿಸುತ್ತೇವೆಯೆಂದರು. ಗ್ರಾಪಂ ಸದಸ್ಯರಾದ ವಿದ್ಯಾಶ್ರೀ ದೇಶಿಂಗೆ, ಶಕುಂತಲಾ ಶಿರಡೋನೆ, ಪ್ರಕಾಶ ಕೋಳಿ, ಕಲ್ಲಪ್ಪಾ ಶಿವರಾಯ ಇವರು ಮಾತನಾಡಿದರು.

ಜುಗೂಳ ಗ್ರಾಮದಲ್ಲಿ ಪದವಿಧರ ಅಭ್ಯರ್ಥಿ ಉಮೇಶ ತಾತ್ಯಾಸಾಹೇಬ ಪಾಟೀಲ ಪಕ್ಷೇತರಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ 405 ಮತಗಳನ್ನು ಪಡೆದು 140 ಮತಗಳ ಅಂತರದಿಂದ ಚುನಾಯಿತರಾದರು. ಗ್ರಾಮದ ಅಭಿವೃದ್ಧಿಗಾಗಿ ಈ ಮೊದಲೇ ಪ್ರಯತ್ನಿಸಿ 40 ಲಕ್ಷ ರೂ. ವೆಚ್ಚದ ಅನುದಾನ ಸಚಿವ ಹಾಗೂ ಸಂಸದರಿಂದ ತಂದು ಪ್ರಯತ್ನಿಸಿದ್ದೇನೆ. ಇದರ ಫಲವಾಗಿ ಮತದಾರರು ನನ್ನನ್ನು ಸದಸ್ಯನಾಗಿ ಆಯ್ಕೆಮಾಡಿ, ಸೇವೆಗಾಗಿ ಅವಕಾಶ ನೀಡಿದ್ದಾರೆ ಎಂದರು.

ಸಮಾರಂಭದಲ್ಲಿ ನೂತನ ಗ್ರಾಪಂ ಸದಸ್ಯರಾಗಿ ಆಯ್ಕೆಗೊಂಡ ಜುಗೂಳ, ಮಂಗಾವತಿ, ಶಹಾಪುರ, ಗ್ರಾಮಗಳ 24 ಸದಸ್ಯರನ್ನು ಅಣ್ಣಾಸಾಹೇಬ ಪಾಟೀಲ ಹಾಗೂ ಇತರ ಮುಖಂಡರು ಸನ್ಮಾನಿಸಿದರು.

ಪೂಜಾ ಕಾರ್ಯಕ್ರಮದಲ್ಲಿ ಕಾಕಾಸಾಹೆಬ್ ಪಾಟೀಲ್, ಎಪಿಎಂಸಿ ಅಧ್ಯಕ್ಷ ಅನೀಲ ಕಡೋಲೆ, ಬಾಳಗೌಡಾ ಪಾಟೀಲ, ಶ್ರೀಕಾಂತ ದೇಸಾಯಿ, ಶೌಕತ್ ಕಲಾವಂತ, ರವೀಂದ್ರ ವಾಂಟೆ, ಮಹಾವೀರ ಕಾಂಬಳೆ, ಕಿರಣ ಮಿಣಚೆ, ಅಕಲಂ ಅಪರಾಜ್, ಬಾಬಾಸಾಹೇಬ ತಾರದಾಳ, ಸೇರಿದಂತೆ ಅನೇಕರು ಇದ್ದರು.

Tags:

error: Content is protected !!