Belagavi

ಅನಾಥ ವೃದ್ಧನ ಅಂತ್ಯಸಂಸ್ಕಾರ: ಮಾನವೀಯತೆ ಮೆರೆದ ಕಾಕತಿ ಪೊಲೀಸರು, ಸಮಾಜಸೇವಕರು

Share

ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ಪೊಲೀಸರು ಹಾಗೂ ಸಮಾಜಸೇವಕರು ಸೇರಿ ಅನಾಥ ವೃದ್ಧನ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆಯ ಮೆರೆದಿದ್ದಾರೆ. ವಾರಸುದಾರರ ಪತ್ತೆಗೆ ಪೊಲೀಸರು ಸಾಕಷ್ಟು ಪ್ರಯತ್ನ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ, ಎಲ್ಲರೂ ಒಗ್ಗೂಡಿ ವೃದ್ಧನ ಅಂತಿಮ ವಿಧಿವಿಧಾನ ಪೂರೈಸಿದ್ದಾರೆ.

ಕಳೆದ ನವೆಂಬರ್ 13ರಂದು ಕಾಕತಿ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಚಳಿಯ ನಡುವೆ ನಿತ್ರಾಣ ಸ್ಥಿತಿಯಲ್ಲಿ ಬಿದ್ದಿದ್ದ ಅಪರಿಚಿತ ವೃದ್ಧನನ್ನು ಸಮಾಜಸೇವಕ ಗಜಾನನ ಗವ್ಹಾಣೆ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಎರಡು ದಿನಗಳ ಹಿಂದೆ ವೃದ್ಧ ಮೃತಪಟ್ಟಿದ್ದರು. ಮೃತರ ಸಂಬಂಧಿಕರ ಪತ್ತೆಗೆ ಕಾಕತಿ ಪೊಲೀಸರು ಶ್ರಮಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಪಿಎಸ್‌ಐ ಮಂಜುನಾಥ ನಾಯ್ಕ, ಪೊಲೀಸ್ ಸಿಬ್ಬಂದಿ ಸಂತೋಷ ಜಂಬಗಿ, ರವಿ ಬಾರಿಕರ, ಸಮಾಜಸೇವಕ ಗಜಾನನ ಗವ್ಹಾಣೆ ಹಾಗೂ ಡಿವೈನ್ ಹೆಲ್ಪಿಂಗ್ ಹ್ಯಾಂಡ್ಸ್ ಗ್ರೂಪ್’ನ ಕಾರ್ಯಕರ್ತರಾದ ಅಶೋಕ ಪಿಂಗಟ್, ಆಶಿಷ್ ಗವ್ಹಾಣೆ, ದೀಪಕ ಪಾಟೀಲ ಮತ್ತು ಇಮ್ರಾನ ಬಾಗವಾನ ಅವರು ಮುಂದೆ ನಿಂತು ಕಾಕತಿ ಸ್ಮಶಾನ ಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

Tags:

error: Content is protected !!