Belagavi

ಸಿಬಿಎಸ್‌ಇ ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆ: ರಿಂಕ್ ರೇಸ್‌ನಲ್ಲಿ ಬೆಳಗಾವಿಯ ಆರ್ಯಾ ಕದಂಗೆ ಚಿನ್ನದ ಪದಕ!

Share

ಬಿರ್ಲಾ ಇಂಟರ್‌ನ್ಯಾಷನಲ್ ಸ್ಕೂಲ್, ಗ್ಲೋಬಲ್ ಇಂಟರ್‌ನ್ಯಾಷನಲ್ ಸ್ಕೂಲ್, ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಮತ್ತು ಶಿವಗಂಗಾ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಆಯೋಜಿಸಲಾಗಿರುವ ಸಿಬಿಎಸ್‌ಇ ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಯ ಮೂರನೇ ದಿನ ರಿಂಕ್ ರೇಸ್‌ನಲ್ಲಿ ದಕ್ಷಿಣ ವಿಭಾಗದ ಸ್ಕೇಟರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, ಬೆಳಗಾವಿಯ ಆರ್ಯಾ ಕದಂ ಚಿನ್ನದ ಪದಕ ಗಳಿಸಿದ್ದಾರೆ. ಜ್ಯೋತಿ ಚಿಂಡಕ್ ಬಹುಮಾನ ವಿತರಿಸಿದರು.

ಈ ವೇಳೆ ಗ್ಲೋಬಲ್ ಇಂಟರ್‌ನ್ಯಾಷನಲ್ ಸ್ಕೂಲ್ ಮುಖ್ಯೋಪಾಧ್ಯಾಯ ಡಾ. ಪ್ರೇಮಾನಂದ ಜಾಧವ್, ರವೀಶ್ ರಾವ್, ಆಲೋಕ್ ತ್ರಿಪಾಠಿ, ಸೂರ್ಯಕಾಂತ ಹಿಂಡಲಗೇಕರ್, ನಿಖಿಲ್ ಚಿಂಡಕ್, ವಿಶ್ವನಾಥ ಯೆಳೂರಕರ್ ಸೇರಿದಂತೆ ತರಬೇತುದಾರರು, ಪೋಷಕರು ಮತ್ತು ಸ್ಪರ್ಧಿಗಳು ಭಾಗವಹಿಸಿದ್ದರು. ವಿವಿಧ ವಿಭಾಗಗಳಲ್ಲಿ ಮೋರ್ಯಾ ನಾಯ್ಕ್, ಸೆಲಿನಾ ಮ್ಯಾಡಿಸನ್, ಆಲಿತ್ ಜೇಮ್ಸ್, ಧನಶಿಕಾ ಕೆ.ಎಸ್., ಸಾಧನಾ ಎಂ., ದಕ್ಷ ಭಾಟಿ, ಜೇಸಿನಾ ಕೊರೇರಾ, ಶಬ್ರೀವಸನ್ ಪಿ.ಬಿ., ನಿಹಾರಿಕಾ ಟಿ. ಚಿನ್ನದ ಪದಕ; ಡೋರೆ ಶ್ರೀಯಾನ್, ವಾಣಿ ಜಿಂದಾಲ್, ಅದ್ವಿಕ್ ಚೌಧರಿ, ಆರಾಧ್ಯ ಸಿಂಗ್, ಜತಿನ್ ಕೇಶವಾನಿ, ಕೈರಾ ಸಿಂಗ್, ಸೌರಭ ಸಾಳೋಖೆ, ಜಾನೂಷಿಯಾ ಎಂ., ಆಯುಷ್ ಭಟ್ಟಾ, ಕಾಶಿಕಾ ಎಸ್. ಬೆಳ್ಳಿ ಪದಕ; ಶೌರ್ಯವರ್ಧನ್ ರಜಪೂತ್, ಆಕೃತಿ ಶೆಟ್ಟಿ, ವಿನಾಯಕ ವಿ., ಲೂಶಾ ಮಹೇಶ್ವರಿ, ಈಶ್ವರ್, ಪಿ.ಎಂ. ರಕ್ಷಿತಾ, ಅಂಶುಮನ್ ಬಘೇಲ್, ಎಸ್. ಸುಧಾಕ್ಷಿಣಾ, ಸಿದ್ಧಾರ್ಥ ಖಾರೋಲ್, ಅಮೃತಾ ಪಿ. ಕಂಚಿನ ಪದಕ ಪಡೆದಿದ್ದಾರೆ.

Tags:

error: Content is protected !!