ಜೈನ್ ಧರ್ಮದ ಯಾವುದೇ ಬೇಡಿಕೆ ಈಡೇರಿಸಲು ಸರಕಾರ ಮುಂದೆ ಬಂದಿಲ್ಲ ಆದ್ದರಿಂದ ಸರಕಾರಕ್ಕೆ ಕೊನೆ ಎಚ್ಚರಿಕೆ ಕೊಡಲು ಡಿಸೆಂಬರ್ 4 ರಂದು ಚಿಕ್ಕೋಡಿಯಿಂದ ಪಾದಯಾತ್ರೆ ಆರಂಭ ನ
ಮಾಡಿ ಮೂರು ದಿನದಲ್ಲಿ ಬೆಳಗಾವಿಗೆ ಪ್ರವೇಶ ಮಾಡುತ್ತೇನೆ ಸರಕಾರ ಈ ಗಡುವು ಒಳಗೆ ನಮ್ಮ ಬೇಡಿಕೆ ಈಡೇರಿಸಲು ಮುಂದಾಗದಿದ್ದರೆ
ಸುವರ್ಣ ಸೌಧದ ಎದುರು ಸತ್ಯಾಗ್ರಹ ಮಾಡಿ, ದೇಹತ್ಯಾಗ ಮಾಡುತ್ತೇನೆ ಎಂದು ಜೈನ್ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಹೇಳಿದರು.
ಹುಬ್ಬಳ್ಳಿ ತಾಲೂಕಿನ ವರೂರು ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜೈನ ಅಭಿವೃದ್ಧಿ ನಿಗಮ ಮಂಡಳಿ ಗಾಗಿ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದ್ದೇನೆ. ಕರ್ನಾಟಕ ಮೂಲದ ಜೈನ ಸಮಾಜದವರು ತೀರ ಬಡವರು ಇದ್ದಾರೆ. ಮಕ್ಕಳಿಗೆ ಶಿಕ್ಷಣ ಕೊಡಿಸಲು ಆಗದಂತವರು ಇದ್ದಾರೆ. ಬಡ ಜೈನ ಸಮಾಜದವರಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಜೈನ ಅಭಿವೃದ್ಧಿ ನಿಗಮಕ್ಕೆ
ಈ ಹಿಂದೆ ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಚಿವ ಸಂತೋಷ ಲಾಡ್ ಅವರು ಮುಖ್ಯಮಂತ್ರಿ ಅವರಿಗೆ ವಿಷಯ ತಿಳಿಸುವುದಾಗಿ ಹೇಳಿದ್ದರು. ಸಚಿವ ಲಕ್ಷ್ಮಣ ಸವದಿ, ಸತೀಶ ಜಾರಕಿಹೊಳಿ, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಸಹ ಮಾತನಾಡಿದ್ದಾರೆ. ಆದರೆ, ಇದುವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಬಾಗಲಕೋಟ ಜಮಖಂಡಿ ತಾಲೂಕಿನ ತೇರದಾಳದಲ್ಲಿ ನ. 19 ರಂದು ಸಮಾಜದ ಮುಖಂಡರ ಸಭೆ ನಡೆಸತೇನಿ. ಕಾಗವಾಡ ಅಥಣಿ ಯಲ್ಲಿ ಶಾಸಕರುಗೆ ಮನವಿ ಸಲ್ಲಿಸಲಾಗುತ್ತದೆ. ನಂತರ
ಡಿ. 4 ರಂದು ಚಿಕ್ಕೋಡಿಯಿಂದ ಪಾದಯಾತ್ರೆ ಆರಂಭ ಮಾಡಿ ಮೂರು ದಿನದಲ್ಲಿ ಬೆಳಗಾವಿಗೆ ಪ್ರವೇಶ ಮಾಡುತ್ತೇನೆ ಸುವರ್ಣ ಸೌಧದ ಎದುರು ಸತ್ಯಾಗ್ರಹ ಮಾಡಿ ನಂತರ ಬೇಡಿಕೆ ಈಡೇರಿಸಲು ಸರಕಾರ ಮುಂದಾಗದಿದ್ದರೆದೇಹತ್ಯಾಗ ಮಾಡುತ್ತೇನೆ ಎಂದರು.
ಜೈನ್ ಸನ್ಯಾಸಿಗಳು ವಿಹಾರ ಮಾಡುವಾಗ ಸ್ಥಳೀಯ ಶಾಲೆಗಳಲ್ಲಿ ರಾತ್ರಿ ವಾಸ್ತವ್ಯ ಕ್ಕೆ ಅನುಕೂಲ ಮಾಡಿಕಿಡುವಂತೆ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದ್ದೇನೆ. ಆದರೂ ಸ್ಪಂಧನೆ ಮಾಡಿಲ್ಲ. ಶಿಕ್ಷಣ ಸಚಿವರು ಸನ್ಯಾಸಿಗೆ ಅವಮಾನ ಮಾಡಿದ್ದಾರೆ. ಸೌಜನ್ಯ ಕ್ಕೂ ಫೋನ್ ಮಾಡಿಲ್ಲ. ಅಂತಹ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಇಲ್ಲದಿದ್ದರೆ ಅವರ ವಿರುದ್ಧವೇ ಪ್ರತಿಭಟನೆ ಮಾಡಬೇಕಾಗುತ್ತದೆ.
ಗೃಹ ಸಚಿವ ಪ್ರಿಯಾಂಕಾ ಖರ್ಗೆ ಅವರು ಸನ್ಯಾಸಿಗಳಿಗೆ ಸುರಕ್ಷತೆ ಕೊಡಬೇಕು ಎಂದರು.
ಬೈಟ್: ಜೈನ್ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು
