ಬೆಳಗಾವಿ ಜಿಲ್ಲೆ:
ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂಜಾಟ ನಡೆಯುತ್ತಿದ್ದ ಸ್ಥಳದ ಮೇಲೆ ಯಮಕನಮರಡಿ ಸಿಪಿಐ ಜಾವೇದ್ ಮುಷಾಪುರಿ ನೇತೃತ್ವದ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಜೂಜಾಟದಲ್ಲಿ ತೊಡಗಿದ್ದ ಆರು ಆರೋಪಿಗಳನ್ನು ವಶಕ್ಕೆ ಪಡೆದು, ಅವರಿಂದ ₹4,000 ನಗದು ಹಣವನ್ನು ಜಪ್ತಿ ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ CR No. 317/2026, ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
*ಆರೋಪಿಗಳ ಹೆಸರುಗಳು:*
1. ಸಾಗರ್ ಸುಶೀಲಾ ಕೆಳಗೇರಿ
2. ರಾಜೇಶ್ ಸುರೇಶ್ ಪಾಟೀಲ
3. ಲಕ್ಷ್ಮಣ ಮಾರುತಿ ದೋಟಗುಂಡಿ
4. ದಸ್ತಗಿರ್ ಉಸ್ಮಾನಸಾಬ್ ಬೇಪಾರಿ
5. ಸಾಗರ್ ಭೀಮಪ್ಪ ಮೆಟ್ರಿ
6. ಶೇಖರ್ ಗಂಗಪ್ಪ ಜಲಗಾರ
ಜೂಜಾಟದ ವಿರುದ್ಧ ಯಮಕನಮರಡಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ
