Belagavi

ಪೊಲೀಸರ ವಶದಿಂದ ಬಿಡುಗಡೆಯಾದ ಶಶಿಕಾಂತ್ ಗುರೂಜಿ

Share

ಬೆಳಗಾವಿಯಲ್ಲಿ ರೈತ ಹೋರಾಟ ಮತ್ತು ಜೈಲ್ ಭರೋ ಚಳುವಳಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಇತ್ತೀಚೆಗೆ ಶೂನ್ಯಸಂಪಾದನಾ ಮಠದ ಶಶಿಕಾಂತ್ ಗುರೂಜಿ ಹಾಗೂ ಮುಖಂಡ ಚೂನ್ನಪ್ಪ ಪೂಜಾರಿ ಸೇರಿದಂತೆ ಹಲವರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದರು. ಸದ್ಯ ಬಿಡುಗಡೆಯಾಗಿರುವ ಶಶಿಕಾಂತ್ ಗುರೂಜಿ ಅವರು ಮುಂದಿನ ಹೋರಾಟದ ದಾರಿ ಕಂಡುಕೊಳ್ಳಲು ರಾಜ್ಯದ ಸಮಸ್ತ ರೈತರಿಗೆ ಮಹತ್ವದ ಕರೆಯನ್ನು ನೀಡಿದ್ದಾರೆ.

ರೈತರ ಜೈಲ್ ಭರೋ ಚಳುವಳಿಯ ಭಾಗವಾಗಿ ಬೆಳಗಾವಿಗೆ ಹೊರಟಿದ್ದ ಶಶಿಕಾಂತ್ ಗುರೂಜಿ ಅವರನ್ನು ಗೋಕಾಕ್ ಡಿವೈಎಸ್‌ಪಿ ನಾಯಕ್ ನೇತೃತ್ವದ ಪೊಲೀಸರು ಮಾರ್ಗಮಧ್ಯೆ ತಡೆದು ವಶಕ್ಕೆ ಪಡೆದಿದ್ದರು. ಸದ್ಯ ಪೊಲೀಸರ ವಶದಿಂದ ಬಿಡುಗಡೆಯಾಗಿರುವ ಗುರೂಜಿ, ರಾಜ್ಯಾದ್ಯಂತ ಇರುವ ಸಮಸ್ತ ಅನ್ನದಾತರು ಹಾಗೂ ರೈತ ಮುಖಂಡರು ಒಂದೇ ವೇದಿಕೆಯಡಿ ಒಗ್ಗೂಡುವಂತೆ ಮನವಿ ಮಾಡಿದ್ದಾರೆ. ಇಂದು ಸಂಜೆ 4:30 ರಿಂದ 5:00 ಗಂಟೆಯೊಳಗೆ ಎಲ್ಲರೂ ಗುರಲಾಪುರದ ವೇದಿಕೆಗೆ ಆಗಮಿಸುವಂತೆ ವಿನಂತಿಸಿರುವ ಅವರು, ಈ ಸಭೆಯಲ್ಲಿ ಚಳುವಳಿಯ ಮುಂದಿನ ಮಹತ್ವದ ರೂಪುರೇಷೆಗಳು ಮತ್ತು ನಿರ್ಣಾಯಕ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

Tags:

error: Content is protected !!