Belagavi

ದೇಶದ ಅಭಿವೃದ್ಧಿಯಲ್ಲಿ ಯುವಕರ ಸಹಭಾಗಿತ್ವ ಮುಖ್ಯ

Share

ಯುವ ಸಂಸತ್ ಕಾರ್ಯಕ್ರಮ ಯುವಜನರ ಸಾರ್ವಜನಿಕ ಸಮಸ್ಯೆಗಳಲ್ಲಿ ತೊಡಗಿಸಿಕೊಳ್ಳಲು ದೃಷ್ಟಿಕೋನವನ್ನು ಸಾಮಾನ್ಯ ಜನರ ಅರ್ಥಮಾಡಿಕೊಳ್ಳಲು, ಅವರ ಅಭಿಪ್ರಾಯಗಳನ್ನು ರೂಪಿಸಲು ಮತ್ತು ಅವುಗಳನ್ನು ಸ್ಪಷ್ಟಪಡಿಸಲು ಈ ಕಾರ್ಯಕ್ರಮವು ಸಹಕಾರಿಯಾಗಿದೆ ಎಂದು ಕೆಎಲ್ಇ ಕಾಲೇಜ್ ಆಫ್ ಫಾರ್ಮಸಿ ಪ್ರಾಂಶುಪಾಲರಾದ ಡಾ. ಸುನಿಲ್ ಜಲಾಲಪೂರೆ ಅವರು ಹೇಳಿದರು.

ಬಸವನಕುಡಚಿಯ ಕೆ.ಎಲ್.ಇ ವಿಶ್ವವಿದ್ಯಾಲಯ, ಕೆ.ಎಲ್.ಇ ಫಾರ್ಮಸಿ ಕಾಲೇಜನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದೊಂದಿಗೆ ಆಯೋಜಿಸಲಾದ ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ ಕೇಂದ್ರ ಬೆಳಗಾವಿಯ, ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಮಾತನಾಡಿದರು. ಉದ್ಘಾಟಿಸಿ ಅವರು ಮಾತನಾಡಿದರು. ಇದರಿಂದ ಯುವಕರು ದೇಶದ ಬದಲಾವಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇದೆ. ಯುವಜನರಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ನಾಯಕತ್ವ ಗುಣಗಳು ಹಾಗೂ ರಾಷ್ಟ್ರ ನಿರ್ಮಾಣದ ಜವಾಬ್ದಾರಿಯ ಅರಿವು ಮೂಡಿಸುವ ಉದ್ದೇಶವಾಗಿದೆ. ದೇಶದಅಭಿವೃದ್ಧಿಯಲ್ಲಿ ಯುವಕರ ಸಹಭಾಗಿತ್ವ ಮುಖ್ಯ. ನಮ್ಮಷ್ಟು ಮಾನವ ಸಂಪನ್ಮೂಲ ಬೇರೆ ಯಾವುದೇ ದೇಶದಲ್ಲಿ ಇಲ್ಲ. ಹಾಗೆಯೇ ಯುವ ಸಮುದಾಯ ನಮ್ಮ ದೇಶದಲ್ಲಿ ಹೆಚ್ಚು ಇದೆ. ಹೀಗಾಗಿ, ಅವರ ಕೊಡುಗೆಯೂ ಬಹುಮುಖ್ಯವಾಗಿದೆ? ಪ್ರತಿಪಾದಿಸಿದರು. ಎಂದು
ಸಂಗ್ರಾಮ್ ಸಾವಂತ್ ಜಿಲ್ಲಾ ಯುವ ಅಧಿಕಾರಿಗಳು ಇವರು ಮಾತನಾಡಿ, ಮೈ ಭಾರತ ಕೇಂದ್ರದ ಬಗ್ಗೆ, ವಿಕಸಿತ ಭಾರತ ಯುವಸಂಸತ್ತು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಒಂದು ಚುನಾವಣೆ ಒಂದು ದೇಶ (one Nation One Election) ಎಂಬ ವಿಷಯ ಮೇಲೆ 03 ನಿಮಿಷಗಳ ಕಾಲಾವಧಿಯಲ್ಲಿ ಭಾಷಣ ಮಾಡಬೇಕು ಜಿಲ್ಲೆಯಿಂದ 03 ಯುವಕರನ್ನು ಮುಂದಿನ ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಸುಮಾರು 100 ಕಿಂತ ಹೆಚ್ಚು ಸ್ಪರ್ಧಾಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಡಾ. ಅಶ್ವಿನಿ ನರಸಣ್ಣವರ್, ರಾಷ್ಟ್ರೀಯ ಸೆವಾಯೋಜನೆ ಅಧಿಕಾರಿಗಳಾದ ವೀರಕುಮಾರ ಜಪ್ತಿ, ಡಾ. ಪೂಜಾ ನೀಲಗಾರ, ಡಾ. ವಿಜಯಾ ದಂಡನ್ನವರ್, ಪ್ರಕಾಶ್ ಕಮತಿ, ಮಲ್ಲಯ್ಯ ಕರಡಿ, ಉಪಸ್ಥಿತರಿದ್ದರು ವೀರಕುಮಾರ್ ಸ್ವಾಗತಿಸಿ ನಿರೂಪಿಸಿ. ವಂದಿಸಿದರು.

Tags:

error: Content is protected !!