Belagavi

ನವೆಂಬರ್ 2ರಿಂದ ಮತ್ತೇ ರೈತರ ಹೋರಾಟ ಆರಂಭ!!!

Share

ನ್ಯಾಯಯುತ ದರಕ್ಕಾಗಿ ಹೋರಾಡುತ್ತಿರುವ ಕಬ್ಬು ಬೆಳೆಗಾರರ ಆಕ್ರೋಶದ ಜ್ವಾಲೆ ಮತ್ತಷ್ಟು ತೀವ್ರಗೊಂಡಿದೆ. ನವೆಂಬರ್ 2ರಂದು ಮತ್ತೊಮ್ಮೆ ಬೃಹತ್ ರೈತ ಹೋರಾಟ ಹಾಗೂ ‘ಹಿಂಡಲಗಾಜೈಲ್ ಭರೋ’ ಚಳುವಳಿಗೆ ರೈತ ಮುಖಂಡ ಚೂನಪ್ಪ ಪೂಜಾರಿ ಕರೆ ನೀಡಿದ್ದಾರೆ. ಪಕ್ಷಾತೀತವಾಗಿ ಒಗ್ಗೂಡಿ ಜೈಲಿಗೆ ಮುತ್ತಿಗೆ ಹಾಕಲು ರಾಜ್ಯದ ಮೂಲೆಮೂಲೆಗಳಿಂದ ಲಕ್ಷಾಂತರ ರೈತರು ಬೆಳಗಾವಿಗೆ ಹರಿದುಬರುವಂತೆ ಹೇಳಿದ್ದಾರೆ.

ನಿನ್ನೆ ನಡೆದ ಹೋರಾಟವನ್ನು ಪಕ್ಷಾತೀತವಾಗಿ ಯಶಸ್ವಿಗೊಳಿಸಿದ ಪ್ರತಿಯೊಬ್ಬ ರೈತಬಾಂಧವರಿಗೂ ಧನ್ಯವಾದ ತಿಳಿಸಿರುವ ಚೂನಪ್ಪ ಪೂಜಾರಿ, ಇಂದು ಕೂಡ ಗುರುಲಾಪುರದಲ್ಲಿ ಪ್ರತಿಭಟನೆ ಮುಂದುವರಿಯಲಿದೆ ಎಂದಿದ್ದಾರೆ. ನವೆಂಬರ್ 2ರಂದು ಬೆಳಗ್ಗೆ 11 ಗಂಟೆಗೆ ರಾಜ್ಯದ 31 ಜಿಲ್ಲೆಗಳಿಂದ ರೈತರು ಗುರುಲಾಪುರಕ್ಕೆ ಆಗಮಿಸಲಿದ್ದು, ಮಧ್ಯಾಹ್ನ 12 ಗಂಟೆಗೆ ಶಶಿಕಾಂತ್ ಗುರೂಜಿ ಅವರ ನೇತೃತ್ವದಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಬೃಹತ್ ಪಾದಯಾತ್ರೆ ಮೂಲಕ ಜೈಲ್ ಭರೋ ಚಳುವಳಿ ನಡೆಸಲು ನಿರ್ಧರಿಸಲಾಗಿದೆ. ರೈತರಿಗೆ ಸಿಗಬೇಕಾದ ಬೆಲೆ ಸಿಗುವವರೆಗೂ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ; ಬೇಕಾದರೆ ಗುಂಡು ಹಾರಿಸಿ ಅಥವಾ ಜೈಲಿಗಟ್ಟಿ, ನಮ್ಮ ಚಳುವಳಿ ನಿಲ್ಲುವುದಿಲ್ಲ ಎಂದು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಜೈಲಿನಲ್ಲಿ ಊಟ-ವಸತಿ ಸೌಕರ್ಯ ಸಿದ್ಧಪಡಿಸಿಕೊಳ್ಳಿ ಎಂದು ಮುಖ್ಯಮಂತ್ರಿಗೆ ಸವಾಲು ಹಾಕಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಮನವಿ ಮಾಡಿರುವ ಮುಖಂಡರು, ನಾಳೆ ಸಾಯಂಕಾಲದೊಳಗೆ ಸೂಕ್ತ ಅಂತಿಮ ನಿರ್ಧಾರವನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಸರ್ಕಾರ ಹಾಗೂ ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದರೆ, ನಾಳೆ ಸಂಜೆಯೇ ಹಿಂಡಲಗಾ ಜೈಲಿಗೆ ತೆರಳಲಿದ್ದಾರೆ. ಈ ಐತಿಹಾಸಿಕ ‘ಜೈಲ್ ಭರೋ’ ಚಳುವಳಿಯನ್ನು ಯಶಸ್ವಿಗೊಳಿಸಲು ರಾಜ್ಯದ ಲಕ್ಷಾಂತರ ರೈತರು ನವೆಂಬರ್ 2ರಂದು ಗುರುಲಾಪುರಕ್ಕೆ ಆಗಮಿಸಬೇಕಾಗಿ ಕರೆ ನೀಡಲಾಗಿದೆ.

Tags:

error: Content is protected !!