Belagavi

ರಾಜ್ಯೋತ್ಸವದ ಪೂರ್ವ ಸಂಜೆ ಬೆಳಗಾವಿಯಲ್ಲಿ ಬೃಹತ್ ಬೈಕ್ ರ್ಯಾಲಿ

Share

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಲ್ಲೂ ಕೆಂಪು-ಹಳದಿ ಬಾವುಟಗಳು ರಾರಾಜಿಸುತ್ತಿದ್ದು, ಕನ್ನಡಮ್ಮನ ವೈಭವದ ತೇರು ಎಳೆಯಲು ಬೆಳಗಾವಿ ನಗರ ಸಂಪೂರ್ಣವಾಗಿ ಸಜ್ಜಾಗಿದೆ. ರಾಜ್ಯೋತ್ಸವದ ಪೂರ್ವ ಸಂಜೆ ಬೆಳಗಾವಿಯಲ್ಲಿ ಬೃಹತ್ ಬೈಕ್ ರ್ಯಾಲಿಯನ್ನು ನಡೆಸಲಾಯಿತು.

ಗಡಿ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಬೆಳಗಾವಿಯಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ರಾಜ್ಯೋತ್ಸವದ ಪೂರ್ವ ಸಂಜೆ ಬೆಳಗಾವಿಯಲ್ಲಿ ಬೃಹತ್ ಬೈಕ್ ರ್ಯಾಲಿಯನ್ನು ನಡೆಸಲಾಯಿತು.
ರಾಜ್ಯೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಇಂದು ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮಕ್ಕೆ ಅಧಿಕೃತ ಚಾಲನೆ ದೊರೆಯಲಿದ್ದು, ಕನ್ನಡದ ಜೈಕಾರ, ಕನ್ನಡ ಪರ ಹಾಡುಗಳು, ವೈವಿಧ್ಯಮಯ ಸಾಂಸ್ಕೃತಿಕ ಕುಣಿತ ಹಾಗೂ ಕಣ್ಣು ಕೋರೈಸುವ ಮೆರವಣಿಗೆಗೆ ಗಡಿನಾಡ ಕನ್ನಡಿಗರು ಉತ್ಸಾಹದಿಂದ ಕಾಯುತ್ತಿದ್ದಾರೆ. ಕನ್ನಡಾಂಬೆಯ ಅದ್ಧೂರಿ ಹಾಗೂ ವೈಭವದ ತೇರನ್ನು ಎಳೆಯಲು ಬೆಳಗಾವಿ ನಗರದ ಮೂಲೆ ಮೂಲೆಗಳಲ್ಲೂ ಕನ್ನಡಿಗರ ಭಾರಿ ಉತ್ಸಾಹ ಕಂಡುಬರುತ್ತಿದ್ದು, ಸಂಭ್ರಮ ಮುಗಿಲು ಮುಟ್ಟಿದೆ.

ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಕನ್ನಡಿಗರ ಬೈಕ್ ರ್ಯಾಲಿ ಅತ್ಯಂತ ಅದ್ಧೂರಿಯಾಗಿ ನಡೆಯಿತು. ಕನ್ನಡಪರ ಸಂಘಟನೆಗಳ ನಾಯಕರು ಹಾಗೂ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ತಮ್ಮ ದ್ವಿಚಕ್ರ ವಾಹನಗಳಲ್ಲಿ ಕನ್ನಡದ ಬಾವುಟಗಳನ್ನು ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿದರು. ಮಹಾಂತೇಶ ನಗರದಿಂದ ಆರಂಭಗೊಂಡ ಈ ರ್ಯಾಲಿಯು ಸಾಮ್ರಾಟ್ ಅಶೋಕ್ ಸರ್ಕಲ್, ಕೊಲ್ಹಾಪೂರ್ ಸರ್ಕಲ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ರಾಣಿ ಚೆನ್ನಮ್ಮ ವೃತ್ತದ ಮಾರ್ಗವಾಗಿ ಸಿರಸಂಗಿ ಲಿಂಗರಾಜ್ ಕಾಲೇಜು ರಸ್ತೆಯವರೆಗೆ ಸಾಗಿತು. ನಗರದ ರಸ್ತೆಗಳು, ವೃತ್ತಗಳು ಮತ್ತು ಕಟ್ಟಡಗಳು ಕೆಂಪು-ಹಳದಿ ಬಾವುಟಗಳು, ಬ್ಯಾನರ್‌ಗಳು ಹಾಗೂ ಬಂಟಿಂಗ್ಸ್‌ಗಳಿಂದ ರಾರಾಜಿಸುತ್ತಿದ್ದು, ನೂರಾರು ಯುವಕರು ಬೈಕ್ ರ್ಯಾಲಿಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!