Chikkodi

ಬೇಡಿಕೆ ಈಡೇರದಿದ್ದರೆ ಹತ್ತರಗಿ ಟೋಲ್‌ನಾಕಾ ಬಳಿ 50 ಲಕ್ಷ ರೈತರಿಂದ ಹೆದ್ದಾರಿ ತಡೆ ಚೂನ್ನಪ್ಪ ಪೂಜೇರಿ ಎಚ್ಚರಿಕೆ

Share

ಶಶಿಕಾಂತ್ ಗುರೂಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ರೈತರ ಹೋರಾಟ ಇಂದು 5ನೇ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರು ರೈತರ ನ್ಯಾಯಯುತ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು. ಇಲ್ಲವಾದಲ್ಲಿ ಮುಂಬರುವ 31ನೇ ತಾರೀಖಿನಂದು ಹತ್ತರಗಿ ಟೋಲ್‌ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಹೋರಾಟ ನಡೆಸಲಾಗುವುದು ಎಂದು ರೈತ ಸಂಘದ ಅಧ್ಯಕ್ಷ ಚೂನ್ನಪ್ಪ ಪೂಜೇರಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

​ಗುರ್ಲಾಪೂರ‌ ರೈತರ ಹೋರಾಟದಲ್ಲಿ ಮಾತನಾಡಿದ ಅವರು ಕಳೆದ ಎರಡು ದಿನಗಳಿಂದ ಸರ್ಕಾರ ಕಾಲಾವಕಾಶ ಕೇಳಿದ್ದರೂ ಯಾವುದೇ ಸಕಾರಾತ್ಮಕ ನಿರ್ಧಾರ ಹೊರಬಂದಿಲ್ಲ. ಇಂದಿನ ಸಂಪುಟ ಸಭೆಯಲ್ಲಾದರೂ ಸರ್ಕಾರ ಕಬ್ಬಿಗೆ ಎಸ್‌ಎಪಿ ಅಡಿಯಲ್ಲಿ ಪ್ರತಿ ಟನ್‌ಗೆ ₹1,000 ಪ್ರೋತ್ಸಾಹ ಧನ ಘೋಷಣೆ ಮಾಡಬೇಕು. ಹಾಗೆಯೇ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯು ಪ್ರತಿ ಟನ್ ಕಬ್ಬಿಗೆ ₹4,500 ದರ ನೀಡಬೇಕು ಮತ್ತು ಜಾಗ ಖರೀದಿಗಾಗಿ ಮೀಸಲಿಟ್ಟ ₹500 ಕೋಟಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರವು ಕಬ್ಬಿಗೆ ಪ್ರತಿ ಟನ್‌ಗೆ ₹1,000 ಪ್ರೋತ್ಸಾಹ ಧನವನ್ನು ತಕ್ಷಣವೇ ಘೋಷಿಸಬೇಕು.ಮುಖ್ಯಮಂತ್ರಿಗಳು ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಅಥವಾ ಸ್ಪಷ್ಟ ಘೋಷಣೆ ಮಾಡುವ ಮೂಲಕ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.

​ನಾಳೆ ಸಂಜೆ 3-4 ಗಂಟೆಯವರೆಗೂ ನಾವು ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತೇವೆ. ಒಂದು ವೇಳೆ ಸರ್ಕಾರ ಹಾಗೂ ಕಾರ್ಖಾನೆ ಮಾಲೀಕರು ಸ್ಪಂದಿಸದಿದ್ದರೆ, 31ನೇ ತಾರೀಖಿನಂದು ರಾಜ್ಯದ 31 ಜಿಲ್ಲೆಗಳಿಂದ ಸುಮಾರು 50 ಲಕ್ಷ ರೈತರು, ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು, ನ್ಯಾಯವಾದಿಗಳು, ವರ್ತಕರು ಹಾಗೂ ಸಾರ್ವಜನಿಕರು ಹತ್ತರಗಿ ಟೋಲ್‌ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆಯಲಿದ್ದೇವೆ” ಎಂದು ಚೂನ್ನಪ್ಪ ಪೂಜೇರಿ ತಿಳಿಸಿದರು.

Tags:

error: Content is protected !!