Belagavi

ವೈಶಾಲಿ ಸುತಾರ್‌ಗೆ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣಾ ಉಪ್ಪಾರರಿಂದ ಸತ್ಕಾರ

Share

ಎಐಸಿಸಿ ಹಿಂದುಳಿದ ವರ್ಗಗಳ ಮಹಿಳಾ ವಿಭಾಗದ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಗೋವಾ ರಾಜ್ಯದ ಉಸ್ತುವಾರಿಯಾಗಿ ನೇಮಕಗೊಂಡಿರುವ ವೈಶಾಲಿ ಸುತಾರ್ ಅವರಿಗೆ ಕರ್ನಾಟಕ ಸರ್ಕಾರದ ಉಪ್ಪಾರ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣಾ ಉಪ್ಪಾರ ಸನ್ಮಾನಿಸಿ ಶುಭಕೋರಿದರು.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ಹಿಂದುಳಿದ ವರ್ಗಗಳ ಮಹಿಳಾ ವಿಭಾಗದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಗೋವಾ ರಾಜ್ಯದ ಪ್ರಭಾರಿಯಾಗಿ ಆಯ್ಕೆಯಾಗಿರುವ ಪ್ರಭಾವಿ ನಾಯಕಿ ವೈಶಾಲಿ ಸುತಾರ್ ಅವರಿಗೆ ಕರ್ನಾಟಕ ಸರ್ಕಾರದ ಉಪ್ಪಾರ ಸಮಾಜ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಭರಮಣ್ಣಾ ಉಪ್ಪಾರ ನೇತೃತ್ವದಲ್ಲಿ ವಿಶೇಷ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಮಾಜ ಹಾಗೂ ರಾಜಕೀಯ ಕ್ಷೇತ್ರದಲ್ಲಿ ನಿರಂತರವಾಗಿ ಶ್ರಮಿಸಿ ಉನ್ನತ ಹಂತಕ್ಕೇರಿದ ವೈಶಾಲಿ ಸುತಾರ್ ಅವರ ಸಾಧನೆಯನ್ನು ಗೌರವಿಸಿ ಮಾತನಾಡಿದ ನಿಗಮದ ಅಧ್ಯಕ್ಷ ಭರಮಣ್ಣಾ ಉಪ್ಪಾರ ಮತ್ತು ಸಮಾಜದ ಹಿರಿಯ ಮುಖಂಡರು, ಅವರ ಈ ಅಭೂತಪೂರ್ವ ಸಫಲತೆಯು ಮುಂಬರುವ ಯುವ ಪೀಳಿಗೆಗೆ ಮತ್ತು ಮಹಿಳೆಯರಿಗೆ ಅಭಿವೃದ್ಧಿಯ ಹಾದಿಯಲ್ಲಿ ಹೊಸ ದಿಕ್ಸೂಚಿಯಾಗಿದೆ ಎಂದರು. ಸತ್ಕಾರ ಸ್ವೀಕರಿಸಿ ಮಾತನಾಡಿದ ನೂತನ ಪ್ರಧಾನ ಕಾರ್ಯದರ್ಶಿ ವೈಶಾಲಿ ಸುತಾರ್, ತಮ್ಮ ಮೇಲೆ ಅಪಾರ ಭರವಸೆಯಿಟ್ಟು ಈ ಮಹತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಿದ ಕಾಂಗ್ರೆಸ್ ವರಿಷ್ಠರಿಗೆ ಹಾಗೂ ನಿರಂತರವಾಗಿ ಬೆಂಬಲವಾಗಿ ನಿಂತ ಸಮಾಜ ಬಾಂಧವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.

Tags:

error: Content is protected !!