ಉತ್ತರ ಕರ್ನಾಟಕದ ಸುಪ್ರಸಿದ್ಧ ಶಕ್ತಿ ಪೀಠ ಸಿಂಧನೂರು ಸಮೀಪದ ಅಂಬಾ ಬೆಟ್ಟದ ಅಂಬಾದೇವಿ ದೇವಸ್ಥಾನದ ಮೂರ್ತಿಯ ಪುನರ್ ಪ್ರತಿಷ್ಠಾಪನಾ ಸಮಾರಂಭ ಅ.30ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಳ್ಳಲಿದೆ.
ಈ ಸಮಾರಂಭಕ್ಕೆ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಬೆಳಗಾವಿ ಹುಕ್ಕೇರಿ ಹಿರೇಮಠ ಸಂಸ್ಥಾನದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಶ್ರೀ ಕ್ಷೇತ್ರದಿಂದ ಭಾನುವಾರ ಆಹ್ವಾನಿಸಲಾಯಿತು. ಸಿಂಧನೂರಿನ ಶಾಸಕ ಹಂಪನಗೌಡ ಬಾದರಲಿ,ತಹಶಿಲ್ದಾರ ಅರುಣ ದೇಸಾಯಿ ಇವರು ಆಹ್ವಾನ ನೀಡಿದರು. ಮುಜರಾಯಿ ಇಲಾಖೆಯ ನಿರ್ದೇಶಕ ಡಾ. ಮಹಾಂತೇಶ ಶಾಸ್ತ್ರೀಗಳು ಆರಾದ್ರಿಮಠ, ಅಂಬಾ ಟ್ರಸ್ಟಿನ ಅಧ್ಯಕ್ಷ ಹನುಮಗೌಡ ಪಾಟೀಲ್,ಆರ್. ಪಾಲಾಕ್ಷಗೌಡ ಉಪಸ್ಥಿತರಿದ್ದರು.
