ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹಾಗೂ ಸಮಾಜದಲ್ಲಿ ಉದ್ಯೋಗ ಸೃಷ್ಟಿಗೆ ಸಕಲ ಮರಾಠಾ ಸಮಾಜ ವತಿಯಿಂದ ಹೊಸ ಪ್ರೋತ್ಸಾಹ ನೀಡಲಾಗುತ್ತಿದೆ. ಇದರ ಭಾಗವಾಗಿ ಬೆಳಗಾವಿಯಲ್ಲಿ ಆರಂಭವಾಗಿರುವ ನೂತನ ಭಾಕರಿ ಕೇಂದ್ರವು ಹಲವರಿಗೆ ಮಾದರಿಯಾಗಿದೆ.
ಸಕಲ ಮರಾಠಾ ಸಮಾಜದ ವತಿಯಿಂದ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬನೆಯನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ, ಬಿಜೆಪಿ ಹಾಗೂ ಸಮಾಜದ ನಾಯಕರಾದ ಕಿರಣ್ ಜಾಧವ್ ಅವರ ಶುಭಹಸ್ತದಿಂದ ಮನಿಷಾ ಪಾಟೀಲ ಅವರ ನೂತನ ‘ಭಾಕರಿ ಕೇಂದ್ರ’ವು ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು. ಈ ರೊಟ್ಟಿ ತಯಾರಿಕಾ ಕೇಂದ್ರವು ಕೇವಲ ವ್ಯಾಪಾರವಷ್ಟೇ ಅಲ್ಲದೆ, ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಬೆಳೆಸಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಈ ವಿನೂತನ ಉಪಕ್ರಮಕ್ಕೆ ಸಮಾಜದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ನೂತನ ಉದ್ಯಮ ಆರಂಭಿಸಿರುವ ಮನಿಷಾ ಪಾಟೀಲ ಅವರಿಗೆ ಗಣ್ಯರು ಹಾಗೂ ಸಾರ್ವಜನಿಕರು ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.
