Belagavi

ಬೆಳಗಾವಿ: ಅನಗೋಳದ ಶ್ರೀ ರಾಮ್ ಯುವಕ್ ಮಂಡಳ ಹಾಗೂ ಮಹಿಳಾ ಮಂಡಳದಿಂದ ಅದ್ಧೂರಿ ‘ಹಾದಗಾ’ ಉತ್ಸವ!

Share

ಸಂಸ್ಕೃತಿ ಮತ್ತು ಪರಂಪರೆಯ ಸಂಕೇತವಾಗಿರುವ ಸಾಂಪ್ರದಾಯಿಕ ‘ಹಾದಗಾ’ ಕಾರ್ಯಕ್ರಮವನ್ನು ಬೆಳಗಾವಿಯ ಅಣಗೋಳದಲ್ಲಿ ಅತ್ಯಂತ ಉತ್ಸಾಹದಿಂದ ಆಚರಿಸಲಾಗಿದೆ. ಶ್ರೀ ರಾಮ್ ಯುವಕ್ ಮಂಡಳ ಹಾಗೂ ರಾಜಹಂಸ ಗಲ್ಲಿ ಮಹಿಳಾ ಮಂಡಳದ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಯುವತಿಯರು ಭಾಗವಹಿಸಿ ಗಮನ ಸೆಳೆದಿದ್ದಾರೆ.

ನಮ್ಮ ಸುಂದರ ಪರಂಪರೆ, ಸಂಸ್ಕೃತಿ, ನಿಸರ್ಗ ಮತ್ತು ಸ್ತ್ರೀಶಕ್ತಿಯ ಸಮೃದ್ಧ ವಾರಸಾವನ್ನು ಜಾಗೃತಗೊಳಿಸುವ ಉದ್ದೇಶದಿಂದ ಬೆಳಗಾವಿಯ ಅನಗೋಳದ ರಾಜಹಂಸ ಗಲ್ಲಿಯಲ್ಲಿ ನವರಾತ್ರೋತ್ಸವದ ನಿಮಿತ್ತ ಸಾಂಪ್ರದಾಯಿಕ ‘ಹಾದಗಾ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನವರಾತ್ರಿಯಲ್ಲಿ ನಿಸರ್ಗಕ್ಕೆ ಕೃತಜ್ಞತೆ ಸಲ್ಲಿಸಲು ಮತ್ತು ಸ್ತ್ರೀಶಕ್ತಿಯನ್ನು ಗೌರವಿಸಲು ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ರಾಜಹಂಸ ಗಲ್ಲಿಯ ಮಹಿಳೆಯರು ಹಾಗೂ ಯುವತಿಯರು ಉತ್ಸಾಹದಿಂದ ಭಾಗಿಯಾದರು. ಕಾರ್ಯಕ್ರಮದ ಮಧ್ಯಭಾಗದಲ್ಲಿ ಆನೆಯ ಚಿತ್ರವಿಟ್ಟು, ಅದರ ಸುತ್ತಲೂ ವೃತ್ತಾಕಾರವಾಗಿ ನಿಂತು ಮಹಿಳೆಯರು ಹಾದಗದ ಸಾಂಪ್ರದಾಯಿಕ ಹಾಡುಗಳನ್ನು ಹಾಡಿದರು.. ಆಧುನಿಕತೆಯ ಭರಾಟೆಯಲ್ಲಿ ನಮ್ಮ ಮೂಲ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಈ ಅಪರೂಪದ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರೀ ರಾಮ್ ಯುವಕ್ ಮಂಡಳದ ಕಾರ್ಯಕರ್ತರು ಮತ್ತು ರಾಜಹಂಸ ಗಲ್ಲಿ ಮಹಿಳಾ ಮಂಡಳದ ಪದಾಧಿಕಾರಿಗಳು ಶ್ರಮಿಸಿದರು.

Tags:

error: Content is protected !!