ದಿ ಬಿಗ್ಗೆಸ್ಟ್ ಫರ್ನಿಚರ್ ಎಕ್ಸಪೋದಲ್ಲಿ ನೇರ ಫ್ಯಾಕ್ಟರಿ ಬೆಲೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಗೃಹೋಪಯೋಗಿ ವಸ್ತುಗಳು ಲಭ್ಯವಿದ್ದು, ಗ್ರಾಹಕರಿಗೆ ಡಬಲ್ ಧಮಾಕಾ ಆಫರ್ಗಳ ಮಹಾಪೂರವೇ ಹರಿದುಬಂದಿದೆ.

ಬೆಳಗಾವಿಯ ಸೀಮಂಡ್ಸ್ ಹಾಲ್ನಲ್ಲಿ ಆಯೋಜಿಸಲಾಗಿರುವ ಈ ವಿಶೇಷ ಫರ್ನಿಚರ್ ಎಕ್ಸಪೋದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸೋಫಾ ಸೆಟ್ಗಳು ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತಿವೆ. ₹1,10,000 ಮೌಲ್ಯದ ಐಷರಾಮಿ ಸೋಫಾವನ್ನು ಕೇವಲ ₹32,500 ಕ್ಕೆ ನೀಡಲಾಗುತ್ತಿದ್ದು, ಇದರೊಂದಿಗೆ ಡ್ರೆಸ್ಸಿಂಗ್ ಟೇಬಲ್ ಮತ್ತು ಕಾಫಿ ಟೇಬಲ್ ಸಂಪೂರ್ಣವಾಗಿ ಉಚಿತ, ಅಷ್ಟೇ ಅಲ್ಲದೆ, ₹95,000 ಮತ್ತು ₹65,000 ಮೌಲ್ಯದ ಸೋಫಾ ಸೆಟ್ಗಳ ಮೇಲೆಯೂ ಭಾರಿ ರಿಯಾಯಿತಿಯಿದ್ದು, ಉಚಿತ ಕೊಡುಗೆಗಳ ಧಮಾಕಾ ಮುಂದುವರೆದಿದೆ. ತೇಗದ ಮರದ (ಟೀಕ್ ವುಡ್) ಮಂಚಗಳನ್ನು ಕೇವಲ ₹28,500 ಕ್ಕೆ ಖರೀದಿಸಬಹುದಾಗಿದ್ದು, ಇದರ ಜೊತೆಗೆ ಮ್ಯಾಟ್ರಸ್ ಮತ್ತು ದಿಂಬುಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಬಜೆಟ್ ಸ್ನೇಹಿ ಗ್ರಾಹಕರಿಗಾಗಿ ₹14,990 ಕ್ಕೆ ಸೋಫಾ ಹಾಗೂ ₹2,990 ಕ್ಕೆ ಆಕರ್ಷಕ ಡ್ರೆಸ್ಸರ್ ಲಭ್ಯವಿದೆ

ಮನೆ ಅಲಂಕಾರಿಕ ವಸ್ತುಗಳು ಮತ್ತು ವಾರ್ಡ್ರೋಬ್ಗಳು ಫ್ಯಾಕ್ಟರಿ ನೇರ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಕ್ವೀನ್ ಸೈಜ್ ಮ್ಯಾಟ್ರಸ್ ಹಾಗೂ ದಿಂಬುಗಳು ಕೇವಲ ₹4,500 ಕ್ಕೆ ದೊರೆಯಲಿವೆ. ಮಧ್ಯಮ ವರ್ಗದ ಹಾಗೂ ಎಲ್ಲಾ ವರ್ಗದ ಗ್ರಾಹಕರ ಅನುಕೂಲಕ್ಕಾಗಿ ಶೂನ್ಯ ಬಡ್ಡಿ (Zero Interest), ಶೂನ್ಯ ಮುಂಗಡ ಪಾವತಿ (Zero Down Payment) ಹಾಗೂ ಶೂನ್ಯ ಪ್ರೊಸೆಸಿಂಗ್ ಫೀ (Zero Processing Fee) ಒಳಗೊಂಡ ವಿಶೇಷ ಇಎಂಐ (EMI) ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಈ ಪ್ರದರ್ಶನವು ತೆರೆದಿರುತ್ತದೆ. ಬೆಳಗಾವಿಯ ಸಮಸ್ತ ಜನತೆ ಕುಟುಂಬ ಸಮೇತರಾಗಿ ಭೇಟಿ ನೀಡಿ, ಈ ಸುವರ್ಣಾವಕಾಶದ ಪ್ರಯೋಜನ ಪಡೆದುಕೊಳ್ಳುವಂತೆ ಆಯೋಜಕರು ಕೋರಿದ್ದಾರೆ.

