ಬೆಳಗಾವಿಯ ಕಣಬರ್ಗಿಯ ಗ್ರಾಮದೇವತೆ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರೆಯು ೨೦೨೮ರಲ್ಲಿ ಜರುಗಲಿದೆ. ಈ ಜಾತ್ರೆಯ ಅಂಗವಾಗಿ ‘ಕೋಣ ಬಿಡುವುದು’ ಹಾಗೂ ವಾರ ಪಾಲನೆ ಮಾಡುವ ಕುರಿತು ದೇವಾಲಯದ ಪ್ರಾಂಗಣದಲ್ಲಿ ಪ್ರಮುಖ ಸಭೆ ಜರುಗಿತು. ಈ ಸಭೆಯಲ್ಲಿ ಪಂಚ ಕಮಿಟಿ ಮತ್ತು ಗ್ರಾಮಸ್ಥರು ಸೇರಿ ವಿವಿಧ ನಿಯಮ ಹಾಗೂ ಕಾರ್ಯಕ್ರಮಗಳನ್ನು ನಿಗದಿಪಡಿಸಿದ್ದಾರೆ.

ಬೆಳಗಾವಿಯ ಕಣಬರ್ಗಿ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರೆಯನ್ನು ೨೦೨೮ರಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಜಾತ್ರೆಯ ಭಾಗವಾಗಿ ದೇವಿಯ ವಾರ ಬಿಡುವ ಕಾರ್ಯಕ್ರಮವು ಅಕ್ಟೋಬರ್ ೩೦, ೨೦೨೬ ರಿಂದ ನವೆಂಬರ್ ೬, ೨೦೨೬ ರವರೆಗೆ ವಿವಿಧ ದಿನಗಳಲ್ಲಿ ನಡೆಯಲಿದೆ. ನವೆಂಬರ್ ೬, ೨೦೨೬ ರ ಶುಕ್ರವಾರ ಬೆಳಿಗ್ಗೆ ೭ ಗಂಟೆಗೆ ಕೋಣ ಹಾಗೂ ಹೊನ್ನಾಟದ ಮೆರವಣಿಗೆಯನ್ನು ತೆಗೆಯಲಾಗುವುದು ಮತ್ತು ಮಧ್ಯಾಹ್ನ ೨ ಗಂಟೆಯೊಳಗೆ ಕೋಣವನ್ನು ಬಿಡಲಾಗುವುದು. ಮಧ್ಯಾಹ್ನ ೩ ಗಂಟೆಯ ನಂತರ ಶಾಸ್ತ್ರ ಪೂಜೆ (ಬಡಿಗೇರ) ಹಾಗೂ ಸಂಜೆ ೪ ಗಂಟೆಗೆ ಸಮಸ್ತ ಗ್ರಾಮಸ್ಥರೊಂದಿಗೆ ಬನ್ನಿ ಮರದ ಪೂಜೆ ನೆರವೇರಿಸಿ ಜಾತ್ರೆಯ ಕಾರ್ಯಕ್ರಮಗಳು ಮುಂದುವರೆಯಲಿವೆ. ಈ ಸಭೆಯಲ್ಲಿ ಭೈರಗೌಡ ಪಾಟೀಲ, ಮುರುಗೆಂದ್ರ ಗೌಡ ಪಾಟೀಲ, ಬಾಬಾಸಾಹೇಬ ಪಾಟೀಲ, ಸಂಜಯ ಇನಾಮದಾರ, ಯಶವಂತ ಜಾನಾಯಿ, ಮಹೇಶ ಮಲಾಯಿ, ಸಿದ್ಧಗೌಡ ಪಾಟೀಲ ಹಾಗೂ ಪಂಚ ಕಮಿಟಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
