BELAGAVI

ಬೆಳಗಾವಿ: ‘ಪ್ರೆಸ್’ ಎಂದು ಬರೆದ ದ್ವಿಚಕ್ರ ವಾಹನ ಬಳಸಿ ಮಾದಕ ವಸ್ತು ಮಾರಾಟ; ಸಿಸಿಬಿ ಬಲೆಗೆ ಬಿದ್ದ ಖತರ್ನಾಕ್ ಕಿಲಾಡಿ!

Share

ಬೆಳಗಾವಿ:ಮಾಧ್ಯಮದ ಲಾಂಛನವನ್ನು ದುರುಪಯೋಗಪಡಿಸಿಕೊಂಡು ಪೊಲೀಸರ ಕಣ್ಣಿಗೆ ಮಣ್ಣೆ ಎರಚಲು ಯತ್ನಿಸಿದ ಆರೋಪಿಯೋರ್ವ ಕೊನೆಗೂ ಸಿಸಿಬಿ ಪೊಲೀಸರ ಖೆಡ್ಡಾಗೆ ಬಿದ್ದಿದ್ದಾನೆ. ಬೆಳಗಾವಿಯ ಸಮರ್ಥ ನಗರದ ಬಳಿ ನಡೆದ ಈ ರೋಚಕ ಕಾರ್ಯಾಚರಣೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಪೊಲೀಸರ ಚಾಣಾಕ್ಷತನಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ದಿನಾಂಕ 03/10/2026 ರಂದು ಬೆಳಗಾವಿ ನಗರದ ಸಿಸಿಬಿ ವಿಭಾಗದ ಪಿಐ ಮಂಜುನಾಥ ನಾಯಕ ಮತ್ತು ಪಿಎಸ್‌ಐ ಮಂಜುನಾಥ ಭಜಂತ್ರಿ ಅವರ ನೇತೃತ್ವದ ತಂಡವು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿಯ ಮೇರೆಗೆ ಬಳ್ಳಾರಿ ನಾಲಾ ಹತ್ತಿರದ ಸಮರ್ಥ ನಗರದಲ್ಲಿ ದಾಳಿ ನಡೆಸಿ, ‘PRESS’ ಎಂದು ಬರೆಸಿಕೊಂಡಿದ್ದ ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಮೆಥಾಂಫೆಟಮೈನ್ ಎಂಬ ಮಾರಕ ಮಾದಕ ವಸ್ತುವನ್ನು ಅಕ್ರಮವಾಗಿ ಸಾಗಿಸಿ ಮಾರಾಟ ಮಾಡುತ್ತಿದ್ದ ಶಾಸ್ತ್ರಿ ನಗರದ ನಿವಾಸಿ ಸತ್ಯಂ ಸಂತೋಷ್ ಕಾವೇಟಿಯಾ (21) ಎಂಬಾತನನ್ನು ವಶಕ್ಕೆ ಪಡೆದಿದೆ. ಆರೋಪಿತನಿಂದ ಒಟ್ಟು 45,000 ರೂಪಾಯಿ ಮೌಲ್ಯದ ಷೀ(ಮಾದಕ) ವಸ್ತು ಹಾಗೂ 20,000 ರೂಪಾಯಿ ಮೌಲ್ಯದ ಸ್ಕೂಟರ್ ಸೇರಿದಂತೆ ಒಟ್ಟು 65,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ಜಪ್ತುಪಡಿಸಿಕೊಳ್ಳಲಾಗಿದ್ದು, ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ. ಈ ದಿಟ್ಟ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ರವರು ವಿಶೇಷವಾಗಿ ಶ್ಲಾಘಿಸಿದ್ದಾರೆ.

Tags:

error: Content is protected !!