Belagavi

ಹೊರರಾಜ್ಯದ ವ್ಯಾಪಾರಿಗಳ ಹಾವಳಿಗೆ ಕಡಿವಾಣ ಹಾಕಿ; ಬೆನಕನಹಳ್ಳಿ ಮುಖ್ಯಾಧಿಕಾರಿಗೆ ಸ್ಥಳೀಯ ವ್ಯಾಪಾರಿಗಳ ಮನವಿ!

Share

ಬೆಳಗಾವಿಯ ಬೆನಕನಹಳ್ಳಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯ ವ್ಯಾಪಾರಿಗಳಿಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಗಣೇಶಪುರ ಮತ್ತು ಲಕ್ಷ್ಮೀನಗರ ವ್ಯಾಪಾರ ಸಂಘದ ವತಿಯಿಂದ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಹೊರರಾಜ್ಯದಿಂದ ಬಂದು ಕಡಿಮೆ ದರದಲ್ಲಿ ಸರಕುಗಳನ್ನು ಮಾರಾಟ ಮಾಡುತ್ತಿರುವವರಿಂದ ಸ್ಥಳೀಯರಿಗೆ ತೀವ್ರ ತೊಂದರೆಯಾಗುತ್ತಿದ್ದು, ಕೂಡಲೇ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಬೆಳಗಾವಿಯ ಬೆನಕನಹಳ್ಳಿ ನಗರ ಪಂಚಾಯಿತಿ ವ್ಯಾಪ್ತಿಗೆ ಬರುವ ಲಕ್ಷ್ಮೀನಗರ ಹಾಗೂ ಗಣೇಶಪುರ ಪ್ರದೇಶದ ಸ್ಥಳೀಯ ವ್ಯಾಪಾರಿಗಳು ಒಗ್ಗೂಡಿ ನೂತನ ಸಂಘವನ್ನು ರಚಿಸಿಕೊಂಡು, ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ತಮ್ಮ ಏರಿಯಾದ ಸ್ಥಳೀಯ ವಾಸಿಗಳಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಸರಕುಗಳನ್ನು ಮಾರಾಟ ಮಾಡಿಕೊಳ್ಳಲು ಅನುಕೂಲಕರ ವಾತಾವರಣ ಕಲ್ಪಿಸಿಕೊಡಬೇಕು ಮತ್ತು ವ್ಯಾಪಾರದಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಬಗೆಹರಿಸಲು ನಗರ ಪಂಚಾಯಿತಿಯವರು ಸೂಕ್ತ ನೆರವು ಹಾಗೂ ಮಾರ್ಗದರ್ಶನ ನೀಡಬೇಕು ಎಂದು ಸಂಘದ ಪರವಾಗಿ ಬಲವಾಗಿ ಕೋರಲಾಗಿದೆ.
ಇದೇ ವೇಳೆ ಪ್ರತಿಭಟನಾ ನಾಯಕ ಶಾಂತಿನಾಥ ಜನಗೌಢ ಮಾತನಾಡಿ, ಹೊರರಾಜ್ಯಗಳಿಂದ ಬಂದು ವ್ಯಾಪಾರ ಮಾಡುತ್ತಿರುವ ಕೆಲವರು ಕಡಿಮೆ ದರದಲ್ಲಿ ಸರಕುಗಳನ್ನು ಮಾರಾಟ ಮಾಡುತ್ತಿರುವುದರಿಂದ ಸ್ಥಳೀಯ ವ್ಯಾಪಾರಿಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸ್ಥಳೀಯ ವ್ಯಾಪಾರಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮನೆ ಮಾಲೀಕರೊಂದಿಗೆ ಮಾತುಕತೆ ನಡೆಸಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಅವರು ಪಂಚಾಯಿತಿ ಅಧಿಕಾರಿಗಳಲ್ಲಿ ಆಗ್ರಹಿಸಿದರು. ಬೈಟ್

ಈ ವೇಳೆ ಸ್ಥಳೀಯ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!