ವಿಜಯಪುರದಲ್ಲಿ ಬಿಜೆಪಿ ಸತ್ತಿದೆ ಎಂದು ದೇಶಾಭಿಮಾನವನ್ನೇ ಉಸಿರಾಗಿಸಿಕೊಂಡಿರುವ ಭಾರತೀಯ ಜನತಾ ಪಕ್ಷವನ್ನು ಅದೇ ಪಕ್ಷದ ಅನ್ನ ತಿಂದು ಬೆಳೆದಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕೆ ಮಾಡಿ ದ್ರೋಹ ಬಗೆದಿದ್ದಾರೆ, ಅವರು ಆಯ್ಕೆಯಾಗಿ ಬಂದಿದ್ದು ಬಿಜೆಪಿ ಪಕ್ಷದ ಚಿಹ್ನೆಯಿಂದ ಎಂಬುದು ಅವರಿಗೆ ನೆನಪಿರಲಿ, ಸ್ವಂತ ಬಲದಿಂದ ಆಯ್ಕೆಯಾಗಿವು ಅಹಂಕಾರ ಅವರಿಗೆ ಇದ್ದರೆ ಅಥವಾ ಆ ತಾಕತ್ತು ಇದ್ದರೆ ಕೂಡಲೇ ಅವರು ರಾಜಿನಾಮೆ ನೀಡಿ ಹೊರಬರಲಿ ಬಿಜೆಪಿ ಓರ್ವ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಅವರ ವಿರುದ್ಧ ಗೆಲುವ ಸಾಧಿಸುವಂತೆ ಮಾಡಿ ನಮ್ಮ ಪಕ್ಷದ ತಾಕತ್ತು ಏನು ಎಂಬುದನ್ನು ತೋರಿಸುತ್ತೇವೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಸವಾಲು ಹಾಕಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತೀಯ ಜನತಾ ಪಕ್ಷದಿಂದಲೇ ಕೇಂದ್ರ ಸಚಿವರಾಗಿ, ಶಾಸಕರಾಗಿ, ಸಂಸದರಾಗಿ ಆಯ್ಕೆಯಾಗಿರುವ ಬಸನಗೌಡ ಪಾಟೀಲ ಯತ್ನಾಳರು ಈಗ ಬಿಜೆಪಿ ಪಕ್ಷವನ್ನೇ ತೆಗಳುತ್ತಿದ್ದಾರೆ, ಅತ್ತ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಿಗೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಂತಹ ಮುತ್ಸದ್ಧಿ ನಾಯಕರನ್ನೇ ಟೀಕಿಸುತ್ತಿದ್ದಾರೆ. ಉಚ್ಛಾಟಿತರಾಗಿದ್ದರೂ ಸಹ ತಮ್ಮ ಛಾಳಿ ಬಿಟ್ಟಿಲ್ಲ. ಪಕ್ಷ ಅವರಿಗೆ ಎಲ್ಲವನ್ನೂ ನೀಡಿದೆ, ಆದರೆ ಅದೇ ಪಕ್ಷದ ಬಗ್ಗೆ ಮಾತನಾಡುವುದು ಎಷ್ಟು ಸರಿ?
ಭಾರತೀಯ ಜನತಾ ಪಕ್ಷ ವಿಜಯಪುರ ಜಿಲ್ಲೆಯಲ್ಲಿ ಶಕ್ತಿಯುತವಾಗಿದೆ, ಅದರಲ್ಲೂ ಯತ್ನಾಳ ಅವರಂತಹ ಹೊಂದಾಣಿಕೆ ರಾಜಕಾರಣಿ ಹೊರ ಹೋದ ನಂತರವAತೂ ಪಕ್ಷ ಇನ್ನಷ್ಟೂ ಬಲಿಷ್ಠವಾಗಿದೆ. ಪಕ್ಷ ಸತ್ತಿದೆ ಎಂದು ಹೇಳುವ ಮುನ್ನ ಯತ್ನಾಳರು ಜಗಳ ಹಚ್ಚುವ ಕನ್ನಡಕವನ್ನು ಕಣ್ಣಿನಿಂದ ತೆಗೆದು ಪಕ್ಷದ ಚಟುವಟಿಕೆಗಳನ್ನು ನೋಡಲಿ, ನಿನ್ನೆಯೇ ಬಿಜೆಪಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಹಾಗೂ ಸೇವಾ ಸಂಕಲ್ಪ ಅಭಿಯಾನ ಮೊದಲಾದ ಕಾರ್ಯಕ್ರಮಗಳಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ, ಪಕ್ಷದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳು, ಕಾರ್ಯಕರ್ತರು ಹೊಸ ಸಂಕಲ್ಪ, ಆಶಯಗಳೊಂದಿಗೆ ಪಕ್ಷ ಕಟ್ಟುವ ಕಾರ್ಯದಲ್ಲಿ ತೊಡಗಿದ್ದಾರೆ, ಯತ್ನಾಳ ತಮ್ಮ ಅಹಂಕಾರದಿAದ ಹೊರಬರಲಿ, ಅವರು ಗೆದ್ದಿರುವುದು ಭಾರತೀಯ ಜನತಾ ಪಕ್ಷದ ಚಿಹ್ನೆಯಿಂದ ಎಂಬುದನ್ನು ನೆನಪಿರಲಿ,
ವಿಜಯಪುರ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷ ಗಟ್ಟಿಯಾದ ಸಂಘಟನೆಯನ್ನು ಹೊಂದಿದ ಪರಿಣಾಮ ಪಕ್ಷದ ನಿಷ್ಠಾವಂತ ಹಾಗೂ ಬಲಿಷ್ಠ ಕಾರ್ಯಕರ್ತರು ಇರುವ ಕಾರಣ ನೀವು ಆಯ್ಕೆಯಾಗಿದ್ದೀರಿ ಎಂಬುದು ನಿಮ್ಮ ಪರಿಜ್ಞಾನದಲ್ಲಿರಲಿ.
ಅಷ್ಟೊಂದು ತಾಕತ್ತಿದ್ದರೆ ಬೇರೆ ಪಕ್ಷದಿಂದ ಇದೇ ವಿಜಯಪುರ ನಗರ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿದಾಗ ಪರಾಭವಗೊಂಡಿದ್ದು ನೆನಪಿಲ್ಲವೇ? ಮತ್ತೆ ಪುನ: ಬಿ.ಎಸ್. ಯಡಿಯೂರಪ್ಪ ಸಾಹೇಬರ ಮನವೊಲಿಸಿ, ಕೈಕಾಲು ಬಿದ್ದು ಪಕ್ಷಕ್ಕೆ ಮರಳಿರುವುದು ನೆನಪಿಲ್ಲವೇ? ಈಗಲೂ ಕಾಲ ಮಿಂಚಿಲ್ಲ, ಕೂಡಲೇ ರಾಜಿನಾಮೆ ನೀಡಿ ಹೊರಬನ್ನಿ, ಓರ್ವ ಸಾಮಾನ್ಯ ಕಾರ್ಯಕರ್ತನಿಗೆ ಟಿಕೇಟ್ ನೀಡಿ ನಮ್ಮ ಪಕ್ಷದ ತಾಕತ್ತು ತೋರಿಸುತ್ತೇವೆ, ಕೂಡಲೇ ಭಾರತೀಯ ಜನತಾ ಪಕ್ಷಕ್ಕೆ ಅಗೌರವ ತರುವ ಮಾತನಾಡಿರುವ ನೀವು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ರಜಪೂತ ಒತ್ತಾಯಿಸಿದ್ದಾರೆ.
