Belagavi

ಬೆಳಗಾವಿಯಲ್ಲಿ ಇಂದಿನಿಂದ 37ನೇ ವಿದ್ಯಾ ಭಾರತಿ ರಾಷ್ಟ್ರೀಯ ಮಹಿಳಾ ಫುಟ್‌ಬಾಲ್ ಪಂದ್ಯಾವಳಿ ಆರಂಭ!

Share

ಬೆಳಗಾವಿಯ ಅನಗೋಳದ ಸಂತ ಮೀರಾ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಇಂದಿನಿಂದ 37ನೇ ಅಖಿಲ ಭಾರತ ವಿದ್ಯಾ ಭಾರತಿ ರಾಷ್ಟ್ರೀಯ ಬಾಲಕಿಯರ ಫುಟ್‌ಬಾಲ್ ಕ್ರೀಡಾಕೂಟವು ಅದ್ಧೂರಿಯಾಗಿ ಆರಂಭಗೊಂಡಿದೆ.

ದೇಶಾದ್ಯಂತದ ಕ್ರೀಡಾ ಪ್ರತಿಭೆಗಳಿಗೆ ಮುಕ್ತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ, ಬೆಳಗಾವಿ ವಿದ್ಯಾ ಭಾರತಿ ಹಾಗೂ ಸಂತ ಮೀರಾ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ಈ ರಾಷ್ಟ್ರೀಯ ಮಟ್ಟದ ಫುಟ್‌ಬಾಲ್ ಕ್ರೀಡಾಕೂಟದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳಾದ ಲೀಲಾವತಿ ಹಿರೆಮಠ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸ್ವಪ್ನಿಲ್ ಶಾಹ, ಏಕಲವ್ಯ ಪ್ರಶಸ್ತಿ ವಿಜೇತ ಸುನೀಲ್ ಆಪ್ಟೇಕರ್, ವೀಕ್ಷಕರಾದ ಸುಬೋಧ ಬೊರಾಹ್, ವಿದ್ಯಾರಭಾರತಿ ರಾಜ್ಯಾಧ್ಯಕ್ಷ ಪರಮೇಶ್ವರ ಹೆಗಡೆ, ರಾಜ್ಯ ಕ್ರೀಡಾ ಪ್ರಮುಖ ದೇವೇಂದ್ರ, ಅಮರನಾಥ, ಜಿಲ್ಲಾಧ್ಯಕ್ಷ ಮಾಧವ ಪುಣೇಕರ್, ಕಾರ್ಯದರ್ಶಿ ಡಾ. ಎಸ್.ವಿ. ಕುಲಕರ್ಣಿ, ಆಡಳಿತಾಧಿಕಾರಿ ರಾಘವೇಂದ್ರ ಕುಲಕರ್ಣಿ, ಮುಖ್ಯೋಪಧ್ಯಾಯಿನಿ ಸುಜಾತಾ ದಪ್ತರದಾರ, ಉಪಮುಖ್ಯೋಪಧ್ಯಾಯಿನಿ ಋತುಜಾ ಜಾಧವ್, ದೈಹಿಕ ಪ್ರಮುಖ ಚಂದ್ರಕಾಂತ ಪಾಟೀಲ್, ಅನುರಾಧಾ ಪುರಿ, ಹಾಗೂ ಶಿವಕುಮಾರ್ ಸುತಾರ್ ಸೇರಿದಂತೆ ಅನೇಕ ಗಣ್ಯರು ಹಾಗೂ ಕ್ರೀಡಾ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕ್ರೀಡಾಪಟುಗಳನ್ನು ಹುರಿದುಂಬಿಸಲಿದ್ದಾರೆ.

Tags:

error: Content is protected !!