Belagavi

ಬೆಳಗಾವಿಯಲ್ಲಿ ರಾಜ್ಯ ಮಟ್ಟದ ಕುಸ್ತಿ ಹಬ್ಬ: ಅಕ್ಟೋಬರ್ 27 ಮತ್ತು 28 ರಂದು ರೋಚಕ ಮ್ಯಾಟ್ ಕುಸ್ತಿ ಪಂದ್ಯಾವಳಿ

Share

ಬೆಳಗಾವಿ ನಗರದಲ್ಲಿ ಮಿಷನ್ ಒಲಿಂಪಿಕ್ ಗೇಮ್ಸ್ ಅಸೋಸಿಯೇಷನ್ ವತಿಯಿಂದ ರಾಜ್ಯ ಮಟ್ಟದ ಕುಸ್ತಿ ಆಯ್ಕೆ ಹಾಗೂ ಸ್ಪರ್ಧೆಯನ್ನು ಅಕ್ಟೋಬರ್ 27 ಮತ್ತು 28 ರಂದು ಅದ್ದೂರಿಯಾಗಿ ಆಯೋಜಿಸಲಾಗಿದೆ. ಟಿಳಕವಾಡಿಯ ಸಾಮರ್ಥ್ಯ ವ್ಯಾಯಾಮ ಮಂದಿರದಲ್ಲಿ ನಡೆಯಲಿರುವ ಈ ಮ್ಯಾಟ್ ಕುಸ್ತಿ ಟ್ರಯಲ್ಸ್‌ನಲ್ಲಿ ರಾಜ್ಯದ ನೂರಾರು ಪೈಲ್ವಾನ್‌ಗಳು ಭಾಗವಹಿಸಲಿದ್ದು, ವಿಜೇತರು ಉಜ್ಜಯನಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ.

ಬೆಳಗಾವಿಯಲ್ಲಿ ಕ್ರೀಡಾಪ್ರಿಯರಿಗೆ ಮತ್ತೊಮ್ಮೆ ಕುಸ್ತಿಯ ರೋಚಕ ಕದನವನ್ನು ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ಕೂಡಿಬಂದಿದೆ. ಮಿಷನ್ ಒಲಿಂಪಿಕ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಬರುವ ಅಕ್ಟೋಬರ್ 27 ಮತ್ತು 28 ರಂದು ಬೆಳಗಾವಿಯ ತಿಲಕವಾಡಿಯ ಸಾಮರ್ಥ್ಯ ವ್ಯಾಯಾಮ ಮಂದಿರದಲ್ಲಿ ಬೃಹತ್ ರಾಜ್ಯ ಮಟ್ಟದ ಕುಸ್ತಿ ಆಯ್ಕೆ ಮತ್ತು ಸ್ಪರ್ಧೆ ಜರುಗಲಿದೆ. ಬೆಳಗಾವಿಯ ಡಿ.ಸಿ.ಪಿ. ನಾರಾಯಣ ಬರಮಣಿ ಅವರ ಹಸ್ತದಿಂದ ಈ ಸ್ಪರ್ಧೆಯ ಜಾಹೀರಾತು ಅನಾವರಣಗೊಳಿಸಲಾಯಿತು.

ಈ ವೇಳೆ ಡಿಸಿಪಿ ನಾರಾಯಣ ಬರಮಣಿ ಅವರು, ಸುಮಾರು 400ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಲಿದ್ದಾರೆ. ಬಾಲಕರು-ಬಾಲಕಿಯರಿಗಾಗಿ ವಿವಿಧ ವಯೋಮಿತಿ ಹಾಗೂ ಓಪನ್ ವಿಭಾಗಗಳಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ವಿಜೇತರಾಗುವವರು ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಜರುಗಲಿರುವ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಗೆ ಕರ್ನಾಟಕವನ್ನು ಪ್ರತಿನಿಧಿಸಲಿದ್ದು, ಭಾರತದ ಪ್ರಮುಖ ಗ್ರಾಮೀಣ ಕ್ರೀಡೆಯಾದ ಕುಸ್ತಿಗೆ ಸಾರ್ವಜನಿಕರು ಹಾಗೂ ನಾಗರಿಕರು ಸಂಪೂರ್ಣ ಬೆಂಬಲ ನೀಡಿ ಪ್ರೋತ್ಸಾಹಿಸಬೇಕೆಂದು ಅವರು ವಿನಂತಿಸಿದ್ದಾರೆ.

ಕುಸ್ತಿಪಟು ಅತುಲ್ ಶಿರೋಳೆ ಅವರು ಬಾಲಕ-ಬಾಲಕಿಯರು ಹಾಗೂ ಪುರುಷ-ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಅಂಡರ್-9, 14, 17, 19 ಹಾಗೂ ಹಿರಿಯರ ಓಪನ್ ವಿಭಾಗಗಳಲ್ಲಿ ವಿವಿಧ ತೂಕದ ಮ್ಯಾಟ್ ಕುಸ್ತಿ ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 7 ರಿಂದ ಅಕ್ಟೋಬರ್ 22 ರವರೆಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಆಸಕ್ತ ಪೈಲ್ವಾನ್‌ಗಳು ನೋಂದಾಯಿಸಿಕೊಳ್ಳಬಹುದು. ಇಲ್ಲಿ ವಿಜೇತರಾಗುವ ಆಟಗಾರರು ಮಧ್ಯಪ್ರದೇಶದ ಉಜ್ಜಯನಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಗ್ರಾಮೀಣ ಕ್ರೀಡೆಯಾದ ಕುಸ್ತಿಯ ಪ್ರೋತ್ಸಾಹಕ್ಕಾಗಿ ಬೆಳಗಾವಿ ಹಾಗೂ ರಾಜ್ಯದ ನಾನಾ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Tags:

error: Content is protected !!