State

ಸಿಎಂ ಡಿಕೆ ಶಿವಕುಮಾರ್ ಭೇಟಿಯಾದ ಪಶ್ಚಿಮ ನೌಕಾಪಡೆ ಕಮಾಂಡರ್ ವೈಸ್ ಅಡ್ಮಿರಲ್ ಸಂಜಯ್ ವಾತ್ಸಾಯನ್!

Share

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಪಶ್ಚಿಮ ನೌಕಾಪಡೆ ಕಮಾಂಡಿನ ಕಮಾಂಡಿಂಗ್ ಇನ್ ಚೀಫ್ ವೈಸ್ ಅಡ್ಮಿರಲ್ ಸಂಜಯ್ ವಾತ್ಸಾಯನ್ ಅವರು ಸೋಮವಾರ ವಿಧಾನಸೌಧದಲ್ಲಿ ಭೇಟಿಯಾದರು. ನೌಕಾಪಡೆಯ ಉನ್ನತ ಅಧಿಕಾರಿಗಳ ನಿಯೋಗವು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಹಲವು ವಿಷಯಗಳ ಕುರಿತು ಮಾತುಕತೆ ನಡೆಸಿತು.

ವಿಧಾನಸೌಧದಲ್ಲಿ ನಡೆದ ಈ ಮಹತ್ವದ ಭೇಟಿಯ ಸಂದರ್ಭದಲ್ಲಿ ರಿಯರ್ ಅಡ್ಮಿರಲ್ ವಿಕ್ರಂ ಮೆನನ್, ನೌಕಾಪಡೆಯ ಹಿರಿಯ ಅಧಿಕಾರಿ (Cmde) ಅಮಿತವ್ ಮುಖರ್ಜಿ, ಕ್ಯಾಪ್ಟನ್ ಜಿ. ರಾಜ ಹಾಗೂ ನೌಕಾ ಸಿಬ್ಬಂದಿಗಳಾದ ಎಲ್. ಎಂ. ಪಿ. ಸಾಹಿಲ್ ಕುಮಾರ್, ಎಲ್. ಎಸ್. ವಿವೇಕ್ ಧಕಡ್, ಎಲ್. ಎಸ್. ಕೆ. ರವಿ ಕೃಷ್ಣನ್ ಮತ್ತು ಎಲ್. ಎಸ್. ಎಂ. ವಿ. ಸೂರಿ ಭಾಗವಹಿಸಿದ್ದರು. ಇದರೊಂದಿಗೆ ಸಂಸದ ಹಾಗೂ ಸಿಎಂ ಸಲಹೆಗಾರ ಜಿ. ಸಿ. ಚಂದ್ರಶೇಖರ್, ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಹಾಗೂ ಬಿಡಿಎ ಮುಖ್ಯ ಆಯುಕ್ತ ಮಣಿವಣ್ಣನ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:

error: Content is protected !!