Belagavi

ಜಾಂಬೋಟಿ-ಕಣಕುಂಬಿ ರಸ್ತೆ ಮಧ್ಯೆ ತಲೆ ಕೆಳಗಾಗಿ ಪಲ್ಟಿಯಾದ ಕಾರ್!!!

Share

ಜಾಂಬೋಟಿ-ಕಣಕುಂಬಿ ರಸ್ತೆಯಲ್ಲಿ ಗೋವಾ ನೋಂದಣಿಯ ಕಾರು ಹಾಗೂ ಹೊಸ ಟಾಟಾ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಕಾರು ತಲೆ ಕೆಳಗಾಗಿ ಬಿದ್ದಿದೆ. ಅದೃಷ್ಟವಶಾತ್ ಪ್ರಾಣಾಪಾಯ ತಪ್ಪಿದ್ದು, ಸ್ಥಳದಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಜಾಂಬೋಟಿಯಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಜಾಂಬೋಟಿ-ಕಣಕುಂಬಿ ರಾಜ್ಯ ಹೆದ್ದಾರಿಯಲ್ಲಿ ಗೋವಾ ನೋಂದಣಿಯ ಕಾರು ಹಾಗೂ ಬ್ರ್ಯಾಂಡ್-ನ್ಯೂ ಟಾಟಾ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಗೋವಾ ವಾಹನವು ಚಾಲಕನ ನಿಯಂತ್ರಣ ತಪ್ಪಿ ತಲೆಕೆಳಗಾಗಿ ರಸ್ತೆಯ ಮೇಲೆ ಬಿದ್ದಿದ್ದರೆ, ಡಿಕ್ಕಿಯ ತೀವ್ರತೆಗೆ ಹೊಸ ಟಾಟಾ ಕಾರಿನ ಏರ್‌ಬ್ಯಾಗ್‌ಗಳು ಕೂಡಲೇ ತೆರೆದುಕೊಂಡಿವೆ. ಸ್ಥಳೀಯರ ಪ್ರಕಾರ ಈ ಅಪಘಾತದಲ್ಲಿ ಯಾರಿಗೂ ಗಂಭೀರ ಸ್ವರೂಪದ ಗಾಯಗಳಾಗಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ. ಆದರೆ, ಅಪಘಾತದ ರಭಸಕ್ಕೆ ರಸ್ತೆಯ ಎರಡು ಕಡೆಗಳಲ್ಲಿಯೂ ನೂರಾರು ವಾಹನಗಳು ಸಾಲುಗಟ್ಟಿ ನಿಂತು ದೀರ್ಘವಾದ ಟ್ರಾಫಿಕ್ ಜಾಮ್ ಉಂಟಾಯಿತು. ಈ ಅನಿರೀಕ್ಷಿತ ಅಪಘಾತಕ್ಕೆ ನಿಖರವಾದ ಕಾರಣವೇನು ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದ್ದು, ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

 

Tags:

error: Content is protected !!