Belagavi

ಬೆಳಗಾವಿಯ ಮಾಹೇಶ್ವರಿ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ

Share

ಬೆಳಗಾವಿಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ಬೆಂಗಳೂರಿನ ವಿಜನ್ ಎಂಪಾವರ್ ಸಂಸ್ಥೆ ಹಾಗೂ ಬಾಸ್ಟ್ ಕಂಪನಿಯ ಸಹಯೋಗದೊಂದಿಗೆ ವಿಜ್ಞಾನ ಪ್ರಯೋಗಾಲಯವು ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿತು. ದೃಷ್ಟಿ ವಿಕಲಚೇತನ ಮಕ್ಕಳ ವಿದ್ಯಾಭ್ಯಾಸಕ್ಕೆ ಇದು ಹೊಸ ಆಯ್ದುಕೊಂಡಿದ್ದು, ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮೆಚ್ಚುಗೆ ವ್ಯಕ್ತಪಡಿಸಿದರು.

ಗುರುವಾರ ದಿನಾಂಕ 01-10-2026 ರಂದು ಬೆಳಗಾವಿಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ, ಬೆಂಗಳೂರಿನ ವಿಜನ್ ಎಂಪಾವರ್ ಸಂಸ್ಥೆ ಹಾಗೂ ಬಾಸ್ಟ್ ಕಂಪನಿಯ ಸಹಯೋಗದೊಂದಿಗೆ ಬೆಳಗಾವಿ ಜಿಲ್ಲಾ ಅಂಧ ಸೇವಾ ಸಂಸ್ಥೆಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯದ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಧರ್ ಹುಕ್ಕೇರಿ ಪ್ರಾಚಾರ್ಯರು, ಬಿ.ಕೆ. ಮಾಡಲ್ ಸೈನ್ಸ್ ಕಾಲೇಜು ಇವರು ಉಪಸ್ಥಿತರಿದ್ದರು. ಮತ್ತು ಇನ್ನೋರ್ವ ಅತಿಥಿಗಳಾಗಿ ಶ್ರೀಮತಿ ಶ್ರೇಯಾ ನೆಲ್ಲಿಸರ್ ರಾಜ್ಯ ಸಂಯೋಜಕರು, ಕರ್ನಾಟಕ ರಾಜ್ಯ, ವಿಜನ್ ಎಂಪಾವರ್, ಇವರು ಉಪಸ್ಥಿತರಿದ್ದು, ಪ್ರಯೋಗಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ವಿಜ್ಞಾನ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ತುಂಬಾ ಉಪಯುಕ್ತ ಎಂದು ತಿಳಿಸಿದರು.


ಈ ವೇಳೆ ನಾಗರತ್ನಾ ರಾಜೇಶ್ವರಿ, ರಾಜೇಶ್, ಬಸಲಿಂಗಮ್ಮ ಚೌಗಲಾ, ಚಿಂತಾಮಣಿ ಗ್ರಾಮೋಪಾಧ್ಯೆ, ಶ್ರೀನಿವಾಸ್ ಶಿವಣಗಿ, ಕಾಂತೇಶ್ ಆಚಾರ್ಯ, ಆನಂದ ಜೋಷಿ, ಕೀರ್ತಿ ರಜಪೂತ, ಅಮೀತ್, ಈರಣ್ಣಾ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!