Belagavi

ಯಮಕನಮರ್ಡಿ ಕ್ಷೇತ್ರದಲ್ಲಿ ಅಭಿಮಾನಿಗಳಿಂದ ರಾಹುಲ ಜಾರಕಿಹೋಳಿ ಯವರ ಜನುಮ ದಿನ ಆಚರಣೆ.

Share

ಯಮಕನಮರ್ಡಿ ಕ್ಷೇತ್ರದಲ್ಲಿ ಬಿ ಡಿ ಸಿ ಸಿ ಬ್ಯಾಂಕ ನಿರ್ದೆಶಕ , ಕಾಂಗ್ರೆಸ್ ಯುವ ಮುಖಂಡ ರಾವುಲ ಜಾರಕಿಹೋಳಿಯವರ ಜನುಮ ದಿನವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದರು.

ಅಲದಾಳ ವಸತಿ ಗೃಹದ ಆವರಣದಲ್ಲಿ ಜರುಗಿದ ಕಾರ್ಯಕ್ರಮವನ್ನು ಕಾರಿಮಠದ ಗುರುಸಿದ್ದ ಮಹಾಸ್ವಾಮಿಗಳು, ಊಳ್ಳಾಗಡ್ಡಿ ಖಾನಾಪುರದ ಸಿದ್ದೇಶ್ವರ ಮಹಾಸ್ವಾಮಿಗಳು,ಹುಲ್ಲೋಳ್ಳಿ ಮಠದ ಅಭಿನವ ಮಂಜುನಾಥ ಮಹಾರಾಜರ ಮತ್ತು ಆನಂದ ಗೋಸಾವಿ ಮಹಾರಾಜರ ಹಾಗೂ ಮುಕ್ತಿ ಮಠದ ಸೋಮೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಯುವ ಮುಖಂಡ ರಾಹುಲ್ ಜಾರಕಿಹೋಳಿ ಶ್ರೀಗಳಿಗೆ ಸತ್ಕರಿಸಿ ಆಶಿರ್ವಾದ ಪಡೆದರು.
ನಂತರ ಕೇಕ್ ಕತ್ತರಿಸಿ ಅಭಿಮಾನಿಗಳಿಗೆ ಹಂಚಿದರು ,ಸಾವಿರಾರು ಜನ ಅಭಿಮಾನಿಗಳು ಹೂ ಗುಚ್ಚ ನೀಡಿ ಅಭಿನಂದಿಸಿದರು.
ಮಂಜುನಾಥ ಮಹಾರಾಜರು ಮಾತನಾಡಿ ರಾಹುಲ್ ಜಾರಕಿಹೋಳಿ ಯವರ ಹುಟ್ಟು ಹಬ್ಬದ ನಿಮಿತ್ಯವಾಗಿ ಇಂದು ಕ್ಷೇತ್ರದ ಜನತೆಯ ಒಗ್ಗೂಡಿಸುವ ಮತ್ತು ಅವರಜೋತೆ ಚಿಂತನ ಮಂತನ ಮಾಡುವ ಕಾರ್ಯಕ್ರಮ ಇದಾಗಿದೆ, ಮಕ್ಕಳು ಹೇಗೆ ಇರಬೇಕು ಎಂಬುವದನ್ನಿ ರಾವುಲ್ ಜಾರಕಿಹೋಳಿಯವರನ್ನು ಕಂಡು ನಡೆಯಬೇಕು ಎಂದರು


ಕಾರಿಮಠದ ಗುರುಸಿದ್ದ ಸ್ವಾಮೀಜಿ ಮಾತನಾಡಿ ಸತೀಶ ಜಾರಕಿಹೋಳಿ ಯವರ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಇಂದು ಜಾತಿ ಮತ ಭೇಧ ವಿಲ್ಲದೆ ಇಂದು ಸಾವಿರಾರು ಜನ ಅಭಿಮಾನಿಗಳು ಇಲ್ಲ ಜಮಾವಣೆ ಗೊಂಡಿದ್ದಾರೆ ಎಂದರು


ರಾಹುಲ್ ಜಾರಕಿಹೋಳಿ ಮಾತನಾಡಿ ತಂದೆ ಸತೀಶ ಜಾರಕಿಹೋಳಿ ಯವರ ಮಾರ್ಗದರ್ಶನದಲ್ಲಿ ದಿನ ದಲಿತರ, ಬಡವರ ರೈತರ ಸೇವೆಮಾಡಲು ಹಾಗೂ ರಾಜ್ಯದ ವಿವಿಧ ಸಹಕಾರಿ ಮತ್ತು ಕಾಂಗ್ರೇಸ್ ಯುವ ಘಟಕದ ಸೇವೆ ಮಾಡುವ ಅವಕಾಶ ದೊರೆತಿದೆ ಮುಂದೆ ಸಹ ಜನರ ಸಹಕಾರ ಇದೆ ರೀತಿ ನಮ್ಮ ಮೇಲೆ ಇರಲಿ ಎಂದು ಜನರಿಗೆ ಅಭಿನಂದನೆ ಸಲ್ಲಿಸಿದರು.


ಕಾರ್ಯಕ್ರಮಕ್ಕೆ ಬಂದ ಅಭಿಮಾನಿಗಳಿಗೆ ಶಾಖಾಹಾರಿ ಮತ್ತು ಮಾಂಸಹಾರಿ ಪ್ರತ್ಯೇಕ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿತ್ತು,
ವೇದಿಕೆ ಮೇಲೆ ಮಾಜಿ ಸಚೀವ ವೀರಕುಮಾರ ಪಾಟೀಲ, ಲಕ್ಣ್ಮಣರಾವ ಚಿಂಗಳೆ, ಮಲಗೌಡಾ ಪಾಟೀಲ, ಸುಪ್ರೀಯಾ ಪಾಟೀಲ, ಕಿರಣ ರಜಪೂತ,ಈರಣ್ಣ ಬಿಸಿರೋಟ್ಟಿ, ರವಿ ಜಿಂಡ್ರಾಳಿ, ಮಹಾಂತೇಶ ಮಗದುಮ್ಮ, ದಸ್ತಗಿರ ಬಸ್ಸಾಪೂರ,ದಯಾನಂದ ಪಾಟೀಲ ,ಅಬ್ದುಲ್ ಗಣಿ, ಜಯಶ್ರೀ ಮಾಳಗಿ, ಉಪಸ್ಥಿತರಿದ್ದರು.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!