ಈ ಹಿಂದೆ ಯಡಿಯೂರಪ್ಪ ಬಜೆಟ್ನಲ್ಲಿ ಇಲ್ಲದಿದ್ದರೂ ಅನುದಾನ ಕೊಟ್ಟಿದ್ದಾರೆ, ಹಿಂದಿನ ಸರ್ಕಾರಗಳು ಮಾಡಿದ ಎಡವಟ್ಟಿಗೆ ಈಗ ಆರ್ಥಿಕ ಇಲಾಖೆಯವರು ಪತ್ರ ಬರೆದಿದ್ದಾರೆ ಎಂದು ಸಿ ಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಕೊಳ್ಳೇಗಾಲದಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಆಗಮಿಸಿದ ಅವರು, ಹನೂರು ತಾಲೂಕಿನ ಮಂಗಲ ಬಳಿ ನಿರ್ಮಿಸಿದ್ದ ಹೆಲಿಪ್ಯಾಡ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಇಂದು ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಇದು ಬಹಳ ಹಿಂದುಳಿದ ಪ್ರದೇಶ ಎಂಬ ಭಾವನೆ ಇದೆ. ಮಲೆಮಹದೇಶ್ವರರ ಇತಿಹಾಸ, ಸಂಸ್ಕಾರ ದೊಡ್ಡ ಆಸ್ತಿ. ಎಲ್ಲ ಬಡ ಜನರ ನಂಬಿಕೆ, ಆಧ್ಯಾತ್ಮಿಕ ಮಾರ್ಗದರ್ಶನವನ್ನು ಅವರು ಅಂದಿನ ಕಾಲದಲ್ಲಿ ಕೊಟ್ಟಿದ್ದಾರೆ ಎಂದರು.
ಗುತ್ತಿಗೆದಾರರಿಗೆ ಸಾವಿರಾರು ಕೋಟಿ ಹಣ ಬಿಡುಗಡೆಯಾಗದ ವಿಚಾರಕ್ಕೆ ಮಾತನಾಡಿ, ಈ ಹಿಂದೆ ಯಡಿಯೂರಪ್ಪ ಬಜೆಟ್ನಲ್ಲಿ ಇಲ್ಲದಿದ್ದರೂ ಅನುದಾನ ಕೊಟ್ಟಿದ್ದಾರೆ, ಹಿಂದಿನ ಸರ್ಕಾರಗಳು ಮಾಡಿದ ಎಡವಟ್ಟಿಗೆ ಈಗ ಆರ್ಥಿಕ ಇಲಾಖೆಯವರು ಪತ್ರ ಬರೆದಿದ್ದಾರೆ ಎಂದರು.
ಭಾರತ್ ಜೋಡೊ 2.Oಗೆ ಇಂದಿನಿಂದ ಶಿಕಾರಿಪುರದಲ್ಲಿ ಚಾಲನೆ ಕುರಿತು ಮಾತನಾಡಿ, ಭಾರತ್ ಜೋಡೊ ಯಾತ್ರೆ ರಾಹುಲ್ ಗಾಂಧಿ ಅವರದ್ದು, ಭಾರತ್ ಜೋಡೊ ಹೆಸರು ಶಾಶ್ವತವಾಗಿ ಉಳಿಯಲಿ ಅಂತ ನಾವು ಆ ಹೆಸರನ್ನು ಇಟ್ಟಿದ್ದೇವೆ. ಪಕ್ಷ ಸಂಘಟನೆಗೆ ಹರಿಪ್ರಸಾದ್ ಈ ಕಾರ್ಯಕ್ರಮ ರೂಪಿಸಿದ್ದಾರೆ ಹೇಳಿದರು.
ಎಸ್ಐಆರ್ ರದ್ಧತಿಗೆ ಕಾಂಗ್ರೆಸ್ ಹೋರಾಟದ ಬಗ್ಗೆ ಮಾತನಾಡಿ, ಚೀಫ್ ಎಲೆಕ್ಷನ್ ಕಮಿಷನರ್ ಜ್ಞಾನೇಶ್ ಕುಮಾರ್ ವಿರುದ್ದ ಅವರ ಜೊತೆ ಇರುವವರೇ ಆರೋಪಿಸುತ್ತಿದ್ದಾರೆ, ಬಿಜೆಪಿಯವರು ತಾನೆ ಅವರನ್ನ ಆಯ್ಕೆ ಮಾಡಿದ್ದು. ಈಗ ಅವರವರೆ ದೂರುತ್ತಿದ್ದಾರೆ ಎಸ್ಐಆರ್ ಒಂದು ಪಿತೂರಿ ಎಂದು ಆರೋಪಿಸಿದರು.
ಇದೇ ವೇಳೆ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ರದ್ದುಪಡಿಸಲು ಶಾಸಕ ಬಿ.ಆರ್.ಪಾಟೀಲ್ ಅವರು ರಾಹುಲ್ ಗಾಂಧಿಗೆ ಪತ್ರ ಬರೆದ ಕುರಿತು ಪ್ರತಿಕ್ರಿಯಿಸಿ, ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ, ಪರಿಶೀಲಿಸುತ್ತೇನೆ ಎಂದು ತಿಳಿಸಿದರು.
ನಂತರ ಸಿಎಂ ಡಿ ಕೆ ಶಿವಕುಮಾರ್ ಅವರು ಚಾಮರಾಜನಗರ ಜಿಲ್ಲೆ ಹನೂರಿನ ಕೆಎಚ್ ಬಿ ಹೆಲಿಪ್ಯಾಡ್ ಬಳಿ ಸಾರ್ವಜನಿಕರ ಅಹವಾಲುಗಳನ್ನು ಬುಧವಾರ ಸ್ವೀಕರಿಸಿದರು.
