ಬರ ಯಾವ ಪಕ್ಷಕ್ಕೂ ಸೀಮಿತವಾಗಿಲ್ಲವಾದ್ದರಿಂದ ಬರದಲ್ಲೂ ಬಿಜೆಪಿ ರಾಜಕೀಯ ಮಾಡಬಾರದು ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ತೆರಳುವುದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದ ಅವರು, ಗ್ಯಾರಂಟಿ ಯೋಜನೆಗಳಿಂದ ಹಣಕಾಸು ಒತ್ತು ಬೀಳುವುದು ಕಾಮನ್ ಸೆನ್ಸ್ ವಿಚಾರ ಎಂದು ಸ್ಪಷ್ಟಪಡಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಡಿಸಿಎಂ ಜಿ. ಪರಮೇಶ್ವರ್ ಅವರು ಮಾತನಾಡಿದರು. ಕೇಂದ್ರದ ಮಾರ್ಗಸೂಚಿಯ ಪ್ರಕಾರ ಬರವೇ ಅಧ್ಯಯನ ನಡೆಯಲಿದ್ದು, ಅಧಿಕಾರಿಗಳು ಬರ ಅಧ್ಯಯನ ಮಾಡಲಿದ್ದಾರೆ. ಬರದಲ್ಲಿಯೂ ಕೂಡ ಬಿಜೆಪಿ ರಾಜಕೀಯ ಮಾಡಬಾರದು. ಬರ ಯಾವ ಪಕ್ಷಕ್ಕೂ ಸಿಮೀತವಾಗಿಲ್ಲ. ಯಾವ ಪಕ್ಷವನ್ನು ಕೂಡ ನೋಡಿ ಬರಲ್ಲ. ಇದಕ್ಕೆ ನಾವು ಬರಲ್ಲವೆಂದರೇ ಏನು ಅರ್ಥವಿದೆ. ಆಡಳಿತ ಪಕ್ಷವಾಗಿ ನಾವು ಕೇಂದ್ರದ ಗಮನಕ್ಕೆ ತರುವ ಪ್ರಯತ್ನ ಮಾಡೇ ಮಾಡ್ತೇವೆ. ಸರ್ವಪಕ್ಷ ನಿಯೋಗ ಕೇಂದ್ರಕ್ಕೆ ಹೋದ್ರೇ ಸಹಾಯವಾಗುತ್ತದೆ. ಕೇಂದ್ರದ ಮೇಲೆ ಒತ್ತಡ ಹಾಕಬಹುದು ಎನ್ನುವುದು ನಮ್ಮ ಉದ್ದೇಶ. ಮತ್ತೇ ಕಳೆದ ಬಾರಿಯಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಅವಕಾಶ ನೀಡುವುದು ಬೇಡ ಎಂದರು.
ಉಚಿತ ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಸಮಸ್ಯೆಯಲ್ಲಿ ಸಿಲುಕಿ ಒದ್ದಾಡುವಂತಾಗಿದೆ’ ಎಂಬ ಸಚಿವ ಬಾಲಕೃಷ್ಣ ಅವರ ಹೇಳಿಕೆ ಬೆನ್ನಲ್ಲೇ ಮತ್ತಷ್ಟು ಮಂತ್ರಿಗಳು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನ ಆರಂಭಿಸಿದಾಗಲೇ ಎಲ್ಲರಿಗೂ ಗೊತ್ತಿದೆ. ಸಹಜವಾಗಿ ಹಣಕಾಸು ಪರಿಸ್ಥಿತಿ ಮೇಲೆ ಒತ್ತಡ ಬರುತ್ತೆ. ಇದು ಕಾಮನ್ ಸೆನ್ಸ್ ವಿಚಾರ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಹಣಕಾಸು ಹೊರೆಯಾದ್ರೂ ಗ್ಯಾರಂಟಿ ನಿರ್ವಹಣೆ ಮಾಡಿದ್ದೇವೆ. ಇಷ್ಟು ವರ್ಷ ಗ್ಯಾರಂಟಿ ಕೊಟ್ಟುಕೊಂಡು ಬಂದಿದ್ದೇವೆ. ಈಗಲೂ ಗ್ಯಾರಂಟಿಗಳು ಮುಂದುವರಿಯುತ್ತೆ ಎಂದವರು ತಿಳಿಸಿದ್ದಾರೆ.
