Dharwad

ರಾಜ್ಯ ಸರ್ಕಾರದ ಖಜಾನೆ ಖಾಲಿ ವಿಚಾರಕ್ಕೆ ಧಾರವಾಡ ಬಿಜೆಪಿ ಆಕ್ರೋಶ…..

Share

ಪರೋಕ್ಷವಾಗಿ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರುವ ವಿಚಾತಕ್ಕೆ ಸಿಎಂಗೆ ಹಣಕಾಸು ಇಲಾಖೆಯಿಂದ ಅಧಿಕೃತವಾಗಿ ಮಾಹಿತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಸರ್ಕಾರ ರಾಜ್ಯದ ಖಜಾನೆ ಲೂಟಿ ಮಾಡಿದೆ ಎಂದು ಆರೋಪಿ ಧಾರವಾಡದಲ್ಲಿ ಬಿಜೆಪಿಯ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಅಣಕು ಶವಯಾತ್ರೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದರು.

ನಗರದ ಹಿಂದಿ ಪ್ರಚಾರ ಸಭೆಯ ಆವರಣದಿಂದ ಡಿಸಿ ಕಚೇರಿಯವರೆಗೆ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ‌ಹಾಗೂ ಸಿಎಂ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಪ್ರತಿಭಟನೆಯಲ್ಲಿ ರಾಜ್ಯ‌ಸರ್ಕಾರದ ಅಣಕು ಶವಯಾತ್ರೆ ಮಾಡಿ ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿರುವುದಕ್ಕೆ ಆರ್ಥಿಕ‌ ಇಲಾಖೆಯ ಪತ್ರ ಈ ಸರ್ಕಾರದ ಲೂಟಿಗೆ ಹೀಡಿದ ಕೈಗನ್ನಡಿಯಾಗಿದೆ ಎಂದು ಘೋಷಣೆ ಕೂಗಿ ಕಿಡಿಕಾರಿದರು. ರಾಜ್ಯ ಗ್ಯಾರಂಟಿ ಒಂದ ವಿಚಾರವನ್ನೇ ಪದೇ ಪದೇ ಹೇಳುವ ಈ ಸರ್ಕಾರ ಗ್ಯಾರಂಟಿಗಳ ನೆಪಮಾತ್ರಕ್ಕೆ ಘೋಷಣೆ ಮಾಡಿ, ರಾಜ್ಯವನ್ನು ಲೂಟಿ ಮಾಡಿದೆ. ಈ ಹಿಂದೆ ಬೆಲೆ ಏರಿಕೆ ವಿಚಾರಕ್ಕೆ ಹಾದಿ ಬಿದಿಯಲ್ಲಿ ಪ್ರತಿಭಟಿಸಿ, ಅಧಿಕಾರಕ್ಕೆ ಬಂದು ಈಗ ಅದೇ ಬೆಲೆ ಏರಿಕೆ ಮಾಡುತ್ತಲೇ, ಕೇಂದ್ರ ಕಡೆ ಬೊಟ್ಟು ಮಾಡುತ್ತಿದೆ. ಪದೇ ಪದೇ ಗ್ಯಾರಂಟಿ ವಿಚಾರ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದು, ಈಗ ಆರ್ಥಿಕ ಇಲಾಖೆ ಖಾಜನೆ ಖಾಲಿಯ ಬಗ್ಗೆ ಪತ್ರ ಬರೆಯುವ ಮಟ್ಟಕ್ಕೆ ಬಂದು ನಿಂತಿದ್ದೆ. ಈ ಸರ್ಕಾರ ತೊಲಗಬೇಕು, ಸಿಎಂ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ‌

Tags:

error: Content is protected !!