State

ವಿಧಾನ ಪರಿಷತ್ತಿನಲ್ಲಿಯೂ ವಂದೇ ಮಾತರಂ ಗೀತೆ ಮೊಟಕು ವಿವಾದ

Share

ವಿಧಾನ ಪರಿಷತ್ತಿನಲ್ಲಿ ವಂದೇ ಮಾತರಂ ಗೀತೆಯನ್ನು ಎರಡು ಚರಣಗಳಿಗೆ ಮೊಟಕುಗೊಳಿಸಿರುವುದನ್ನು ವಿರೋಧಿಸಿ ವಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದವು. ಕಸ್ತೂರಿ ರಂಗನ್ ವರದಿ ಹಾಗೂ ಬರಗಾಲದಂತಹ ಗಂಭೀರ ವಿಷಯಗಳ ಚರ್ಚೆಗೆ ಅಡ್ಡಿಪಡಿಸಿದ ಕಾರಣ ಸದನದ ಕಲಾಪವನ್ನು ಮುಂದೂಡಲಾಗಿದೆ.

ಇಂದು ವಿಧಾನ ಪರಿಷತ್ ಕಲಾಪದ ಆರಂಭದಲ್ಲೇ ವಂದೇ ಮಾತರಂ ಗೀತೆಯನ್ನು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸಿ ಸರ್ಕಾರದ ನಿರ್ಣಯದಂತೆ ಮೊಟಕುಗೊಳಿಸಲಾಯಿತು. ಸಭಾಪತಿಗಳು ಸಂವಿಧಾನದ ಪೀಠಿಕೆ ಓದಲು ಮುಂದಾದರೂ, ವಿಪಕ್ಷ ಸದಸ್ಯರು ಎಚ್ಚೆತ್ತು ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಹಾಡಿದರು. ಇದಕ್ಕೆ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು, ಸದನದಲ್ಲಿ ಧಿಕ್ಕಾರದ ಘೋಷಣೆಗಳು ಮುಗಿಲು ಮುಟ್ಟಿದವು.
ವಿಧಾನ ಪರಿಷತ್ತಿನಲ್ಲಿಯೂ ಸದನದ ಕಲಾಪ ಆರಂಭವಾಗುತ್ತಿದ್ದಂತೆ ವಂದೇ ಮಾತರಂ ಗೀತೆಯನ್ನು 2 ಚರಣಕ್ಕೆ ಮೊಟಕುಗೊಳಿಸಲಾಯಿತು. ಸಭಾಪತಿಗಳು ಸಂವಿಧಾನದ ಪೀಠಿಕೆ ಓದಲು ಆರಂಭಿಸಿದರೂ ವಿಪಕ್ಷಗಳು ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಹಾಡಿದವು. ಸಭಾಪತಿಗಳು ಹಾಗೂ ಸಭಾನಾಯಕರು ಸರ್ಕಾರದ ತಿರ್ಮಾಣದಂತೆ 2 ಚರಣಕ್ಕೆ ಸಿಮೀತಗೊಳಿಸಿದ್ದು, ಸರ್ಕಾರದ ಸಭೆಗಳಲ್ಲಿ, ರಾಜ್ಯಪಾಲರು, ರಾಷ್ಟ್ರಪತಿಗಳು ಮತ್ತು ಪ್ರಧಾನಿಗಳು ಇರುವೆಡೆ ಸಂಪೂರ್ಣ ಗೀತೆಗಳನ್ನು ಹಾಡಲಾಗುವುದು ಎಂದರು. ಇದಕ್ಕೆ ವಿಪಕ್ಷಗಳು ಧಿಕ್ಕಾರದ ಘೋಷಣೆಗಳನ್ನು ಕೂಗಲು ಆರಂಭಿಸಿದರು.

ಸಭಾನಾಯಕ ಯತೀಂದ್ರ ಸಿದ್ಧರಾಮಯ್ಯನವರು ಸದನವನ್ನು ಕಸ್ತೂರಿ ರಂಗನ್ ವರದಿ ಮತ್ತು ರೈತರು ಸಮಸ್ಯೆ ಹಾಗೂ ಬರಗಾಲದ ಕುರಿತು ಚರ್ಚಿಸಲು ಕರೆಯಲಾಗಿದ್ದು, ಸದನದ ಸಮಯವನ್ನು ಹಾಳು ಮಾಡದಂತೆ ಆಗ್ರಹಿಸಿದರು. ಇದಕ್ಕೆ ವಿಪಕ್ಷ ನಾಯಕ ಛಲುವಾದಿ ನಾರಾಯಣ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. .
ಡಿಸಿಎಂ ಜಿ. ಪರಮೇಶ್ವರ್ ಅವರು, ಕಸ್ತೂರಿ ರಂಗನ್ ವರದಿ, ರೈತರ ಸಮಸ್ಯೆ ಹಾಗೂ ಬರಗಾಲದ ಕುರಿತು ಚರ್ಚಿಸಲು ಈ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು. ವಿಪಕ್ಷಗಳು ಸಮಯ ಹಾಳು ಮಾಡದೆ ಗಂಭೀರ ವಿಷಯಗಳ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದು ಆಗ್ರಹಿಸಿದರಾದರೂ, ವಿಪಕ್ಷ ನಾಯಕ ಛಲುವಾದಿ ನಾರಾಯಣ ಸ್ವಾಮಿ ಮತ್ತು ಇತರೆ ಸದಸ್ಯರು ಸರ್ಕಾರದ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. .

ಗೀತೆ ಮೊಟಕುಗೊಳಿಸಿದ ಸರ್ಕಾರದ ಕ್ರಮದ ವಿರುದ್ಧ ವಿಪಕ್ಷ ಸದಸ್ಯರು ಸತತವಾಗಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮುಂದುವರಿಸಿದರು. ಪ್ರಮುಖ ರೈತ ಹಾಗೂ ಪರಿಸರ ಸಂರಕ್ಷಣಾ ವಿಷಯಗಳ ಬದಲು ಗೀತೆಯ ವಿವಾದವೇ ಮುಂಚೂಣಿಗೆ ಬಂದ ಹಿನ್ನೆಲೆಯಲ್ಲಿ, ಕಲಾಪವನ್ನು ಸುಗಮವಾಗಿ ನಡೆಸಲು ಸಾಧ್ಯವಾಗದೆ ಸಭಾಪತಿಗಳು ಅಧಿವೇಶನವನ್ನು ಮುಂದೂಡಬೇಕಾಯಿತು. .

Tags:

error: Content is protected !!