ಹುಬ್ಬಳ್ಳಿಯಲ್ಲಿ ಗಣೇಶ್ ಮೆರವಣಿಗೆ ಸಂದರ್ಭದಲ್ಲಿ
ಅಜಾನ್ ವೇಳೆ ಡಿಜೆ ಬಂದ್ ಮಾಡಿ ಮೆರವಣಿಗೆ ಮುಂದುವರಿಸುವ ಮೂಲಕ ಗಣೇಶೋತ್ಸವ ಮಂಡಳಿ ಹಿಂದೂ ಮುಸ್ಲಿಂ ಸೌಹಾರ್ದತೆಯನ್ನು ಸಾರಿದ್ದಾರೆ.
ಟೀಪು ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಸಾಗುತ್ತಿದ್ದ ವೇಳೆ ಅಜಾನ್ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಗಣೇಶೋತ್ಸವ ಮಂಡಳಿಯವರು ಡಿಜೆ ಸಂಗೀತವನ್ನು ಬಂದ್ ಮಾಡಿ ಧಾರ್ಮಿಕ ಭಾವನೆಗಳಿಗೆ ಗೌರವ ಸೂಚಿಸಿದರು. ಅಜಾನ್ ಮುಗಿದ ಬಳಿಕ ಮೆರವಣಿಗೆಯನ್ನು ಮುಂದುವರಿಸುವ ಮೂಲಕ ಸೌಹಾರ್ದತೆ ಮೆರೆದರು.

