Belagavi

ವಿಧಾನಸಭೆಯಲ್ಲಿ ವಂದೇ ಮಾತರಂ ಗೀತೆ ಎರಡೇ ಚರಣಕ್ಕೆ ಮೊಟಕು…

Share

ಇಂದಿನ ವಿಶೇಷ ಅಧಿವೇಶನದಲ್ಲಿ ಬರಗಾಲ ಮತ್ತು ಕಸ್ತೂರಿ ರಂಗನ್ ವರದಿ ಜಾರಿ ಕುರಿತ ಗಂಭೀರ ಚರ್ಚೆಯ ಆರಂಭದಲ್ಲೇ ವಂದೇ ಮಾತರಂ ಗೀತೆಯ ವಿವಾದ ತೀವ್ರಗೊಂಡಿದೆ. ಸಭಾಪತಿಗಳ ಸೂಚನೆಯಂತೆ ಗೀತೆಯನ್ನು ಮೊಟಕುಗೊಳಿಸಿದರೂ ಆದರೂ ಕೂಡ ಬಿಜೆಪಿ ಸದಸ್ಯರು ಸಂಪೂರ್ಣ ಗೀತೆ ಹಾಡಿದ್ದು ಗಮನ ಸೆಳೆಯುತು.

ಇಂದು ವಿಧಾನಸಭೆಯಲ್ಲಿ ಬರಗಾಲ ಹಾಗೂ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಲಾಗಿತ್ತು. ಕಲಾಪದ ಆರಂಭದಲ್ಲಿ ಸಭಾಪತಿಗಳ ಆಗಮನದ ನಂತರ ‘ವಂದೇ ಮಾತರಂ’ ಗೀತೆಯನ್ನು ಕೇವಲ ಎರಡು ಚರಣಗಳಿಗೆ ಮೊಟಕುಗೊಳಿಸಲಾಯಿತು. ಆದರೇ ಬಿಜೆಪಿ ಸದಸ್ಯರು, ಸಭಾಪತಿಗಳು ಸಂತಾಪ ಸೂಚನೆ ಆರಂಭಿಸಿದರೂ ಲೆಕ್ಕಿಸದೆ ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಗಾಯನ ಮಾಡಿದರು ಮತ್ತು “ವಂದೇ ಮಾತರಂ” ಘೋಷಣೆಗಳನ್ನು ಕೂಗಿದರು.

Tags:

error: Content is protected !!