ಉತ್ತರ ಕರ್ನಾಟಕದ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಬಲ ನೀಡುವ ಉದ್ದೇಶದಿಂದ ಹುಬ್ಬಳ್ಳಿಯ ಗಬ್ಯೂರಿನಲ್ಲಿ ನಿರ್ಮಿಸಲಾಗಿರುವ ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮೀಜಿ ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯದ ನೂತನ ಶೈಕ್ಷಣಿಕ ಕಟ್ಟಡ ಹಾಗೂ 1,200 ಹಾಸಿಗೆಗಳ ಕೆಎಲ್ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವನ್ನು ಕೇಂದ್ರ ಸಚಿವ ಅಮೀತ್ ಶಾಹ ಅವರ ಶುಭ ಸಂದೇಶದೊಂದಿಗೆ ಇಂದು ಲೋಕಾರ್ಪಣೆಗೊಳಿಸಲಾಯಿತು.


ಉತ್ತರ ಕರ್ನಾಟಕದ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಬಲ ತುಂಬುವ ಉದ್ದೇಶದಿಂದ ಹುಬ್ಬಳ್ಳಿಯ ಗಬ್ಯೂರಿನಲ್ಲಿ ನೂತನವಾಗಿ ತಲೆಎತ್ತಿರುವ ‘ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮೀಜಿ ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯದ ನೂತನ ಶೈಕ್ಷಣಿಕ ಕಟ್ಟಡ ಹಾಗೂ 1,200 ಹಾಸಿಗೆಗಳ ಕೆಎಲ್ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ’ವು ಇಂದು ಕೇಂದ್ರ ಸಚಿವ ಅಮಿತ್ ಶಾ ಅವರ ಶುಭ ಸಂದೇಶದೊಂದಿಗೆ ಲೋಕಾರ್ಪಣೆಗೊಂಡಿತು. ಅನಾರೋಗ್ಯದ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗದಿದ್ದರೂ, ಅವರ ವಿಶೇಷ ಸಂದೇಶವನ್ನು ವಾಚಿಸಲಾಯಿತು. ಮೂರು ಸಾವಿರ ಮಠದ ನಿರಂಜನ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದ ಕಾರ್ಯಕ್ರಮದಲ್ಲಿ ಸಚಿವರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಕೆ.ಎಲ್.ಇ ಕಾರ್ಯಾಧ್ಯಕ್ಷ ಮತ್ತು ಕಾಹೇರನ ಕುಲಾಧಿಪತಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಸ್ಪಪ್ತರ್ಷಿ ಮತ್ತು ದಾನಿಗಳನ್ನು ಸ್ಮರಿಸುತ್ತ, ಕೇಂದ್ರ ಸಚಿವ ಅಮೀತ್ ಶಾಹ್ ಅವರು ಅನಾರೋಗ್ಯದ ಹಿನ್ನೆಲೆ ಕಾರ್ಯಕ್ರಮಕ್ಕೆ ಆಗಮಿಸದಿದ್ದರೂ ಅವರು ನೀಡಿದ ಸಂದೇಶವನ್ನು ಓದಿ ಹೇಳಿದರು. ಹುಬ್ಬಳ್ಳಿಯ ಈ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಮೂರು ಸಾವಿರ ಮಠದ ಶ್ರೀಗಳ ಗುರುಗಳು 23 ಎಕರೆ ಜಾಗವನ್ನು ದಾನವಾಗಿ ನೀಡಿದ್ದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಕೆ.ಎಲ್.ಇ ಸಂಸ್ಥೆಯೂ ದಾನದಿಂದ ತುಂಬಿದ ಪರಂಪರೆಯನ್ನು ಹೊಂದಿದೆ ಎಂದು ದಾನಿಗಳ ಕಾರ್ಯವನ್ನು ಸ್ಮರಿಸಿದರು. ಕೆ.ಎಲ್.ಇಗೆ 110 ವರ್ಷಗಳಾಯಿತು. ಹುಬ್ಬಳ್ಳಿ ಮತ್ತು ಕೆ.ಎಲ್.ಇ ಸಂಬಂಧ ಅತ್ಯಂತ ಹಳೆಯದಾಗಿದೆ. ಕೆ.ಎಲ್.ಇ ಜಗತ್ತಿಗೆ ದೊಡ್ಡ ಕೊಡುಗೆಯನ್ನು ನೀಡಿದೆ. 5500 ಹಾಸಿಗೆಯ ಆಸ್ಪತ್ರೆಯನ್ನು ಬೆಳಗಾವಿಯಲ್ಲಿ ಕೆ.ಎಲ್.ಇ ನಡೆಸುತ್ತಿದ್ದು, ಶಿಕ್ಷಣದೊಂದಿಗೆ ವೈದ್ಯಕೀಯ ಸೇವೆಯನ್ನು ನೀಡುತ್ತಿದೆ. ಸಪ್ತರ್ಷಿಗಳು ಹಾಕಿಕೊಟ್ಟ ದಾರಿಯಲ್ಲಿ ಕೆ.ಎಲ್.ಇಗೆ ಜನಸೇವೆಯೇ ಮುಖ್ಯ. ಪಿಎಂ ಮೋದಿ ಅವರು ದೇಶದಲ್ಲೇ ರಿಸರ್ಚ್ ಸೇಂಟರ್ ನಿರ್ಮಿಸಬೇಕೆಂದು ಹೇಳಿದ್ದರೂ, ಅದನ್ನು ಪೂರ್ಣಗೊಳಿಸಲಾಗಿದೆ. ಸುಮಾರು 700 ಕೋಟಿ ರೂಪಾಯಿ ಖರ್ಚು ಮಾಡಿ ಎಐ ಇಂಟಲಿಜೆಂಟ್ ಸೌಲಭ್ಯ ಈ ಆಸ್ಪತ್ರೆ ಒಳಗೊಂಡಿದೆ. ಪಿಎಂ ಮೋದಿ ಅವರು ದೇಶಕ್ಕೆ ನೀಡಿದ ವೈದ್ಯಕೀಯ ಕೊಡುಗೆಯನ್ನು ಕೂಡ ಸ್ಮರಿಸಿದರು.
ವೈದ್ಯಕೀಯ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಶರಣ ಪ್ರಕಾಸ್ ಪಾಟೀಲ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ನಂಬರ್ ಒನ್ ಸ್ಥಾನದಲ್ಲಿದೆ. ಕರ್ನಾಟಕ ಹೆಲ್ತ್ ಹಬ್ ಆಗಿದೆ. ಹಿರಿಯರು ತಮ್ಮ ದೂರದೃಷ್ಠಿಯಿಂದ ಖಾಸಗಿ ಸಂಸ್ಥೆಗಳಿಗೆ ನೀಡಿದ ಅವಕಾಶದಿಂದ ಕೆ.ಎಲ್.ಇ. ಬಿ ಎಲ್ ಡಿ ಯಂತಹ ಸಂಸ್ಥೆಗಳು ಬೆಳೆದು ಬಂದಿವೆ. ಕರ್ನಾಟಕದ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಮಠ ಮಾನ್ಯಗಳು, ಖಾಸಗಿ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಿವೆ. ಕರ್ನಾಟಕದ ಏಳ್ಗೆಯಲ್ಲಿ ಕೆ.ಎಲ್.ಇಯ ಪಾತ್ರವೂ ಬಹುಮುಖ್ಯವಾಗಿದೆ. ಸರ್ಕಾರ ಮಾಡುವಂತಹ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡುತ್ತಿರುವುದನ್ನು ಶ್ಲಾಘಿಸಲೇ ಬೇಕು. ಈ ಎಲ್ಲ ಸಂಸ್ಥೆಗಳಿಗೆ ಸರ್ಕಾರದ ಬೆಂಬಲ ಸದಾಯಿದೆ ಎಂದರು.
ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಷಿ ಅವರು, ಜಾಗತೀಕ ಮಟ್ಟದಲ್ಲಿ ನುರಿತ ವೈದ್ಯರ ಅವಶ್ಯಕತೆಯಿದೆ. ಭಾರತದ ವೈದ್ಯರ ಮೇಲೆ ಅಪಾರವಾದ ವಿಶ್ವಾಸವಿರುವ ಕಾಲಖಂಡವಿದೆ. ಸರ್ವೇ ಜನಃ ಸುಖಿನೋ ಭವಂತು ಎಂಬದನ್ನು ಭಾರತದಲ್ಲಿ ಕಾಣಬಹುದು. ಕೆ.ಎಲ್.ಇ ಸಂಸ್ಥೆ ಜಾಗತೀಕಮಟ್ಟದಲ್ಲಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರಿಂದ ಗುರುತಿಸುವಂತಾಗಿರುವುದು ಹೆಮ್ಮೆಯ ವಿಷಯ ಎಂದರು.
ಈ ವೇಳೆ ಮಾಜಿ ಮುಖ್ಯಮಂತ್ರಿಗಳು ಮತ್ತು ಹಾಲಿ ಸಂಸದರಾದ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ರಾಜ್ಯಸಭಾ ಸದಸ್ಯ ಎಂ. ನಾಗರಾಜ್, ಶಾಸಕ ಪ್ರಸಾದ ಅಬ್ಬಯ್ಯ, ಮಹೇಶ್ ಟೆಂಗಿನಕಾಯಿ, ಅರವಿಂದ ಬೆಲ್ಲದ, ಮಹಾಂತೇಶ ಕೌಜಲಗಿ, ಎಂ.ಆರ್. ಪಾಟೀಲ್, ನಿರ್ದೇಶಕರಾದ ಅಮೀತ್ ಕೋರೆ, ಪ್ರೀತಿ ದೊಡವಾಡ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
